ಚುನಾವಣಾ ಪೂರ್ವ ಸಿದ್ಧತೆ ► ಘಟಕಾಧಿಕಾರಿಯವರ ಸಭೆ

(ನ್ಯೂಸ್ ಕಡಬ) newskadaba.com ಮಂಗಳೂರು, ಎ.11. ಚುನಾವಣಾ ಪೂರ್ವ ಸಿದ್ಧತೆಗೆ ಸಂಬಂಧಿಸಿದಂತೆ ಎ.10ರಂದು ಬೆಳಿಗ್ಗೆ 11.00 ಗಂಟೆಗೆ ಜಿಲ್ಲಾ ಗೃಹರಕ್ಷಕ ದಳ ಕಛೇರಿಯಲ್ಲಿ 14 ಘಟಕಗಳ “ಘಟಕಾಧಿಕಾರಿ ಸಭೆ”ಯನ್ನು ನಡೆಸಲಾಯಿತು.

ಈ ಸಭೆಯಲ್ಲಿ ಗೃಹರಕ್ಷಕಿ ಶಿಲ್ಪಾ ರವರು ಪ್ರಾರ್ಥನೆಗೈದರು, ಉಪ ಸಮಾದೇಷ್ಟರಾದ ಶ್ರೀ ರಮೇಶ್ ರವರು ಸ್ವಾಗತ ಭಾಷಣ ಮಾಡಿದರು ಹಾಗೂ ಉಪ ಪೊಲೀಸ್ ಆಧೀಕ್ಷಕರಾದ ಸಜಿತ್ ರವರು ದೀಪ ಬೆಳಗಿಸಿದರು, ಡಾ| ಮುರಲೀ ಮೋಹನ್ ಚೂಂತಾರು ರವರು ಅಧ್ಯಕ್ಷರ ಭಾಷಣ ಮಾಡಿದರು. ಶ್ರೀಮತಿ ಉಷಾ, ಸ್ಟಾಫ್ ಆಫೀಸರ್ ರವರು ವಂದನಾರ್ಪಣೆ ಮಾಡಿದರು ಹಾಗೂ ಮಂಗಳೂರು ಘಟಕದ ಘಟಕಾಧಿಕಾರಿ ಮಾರ್ಕ್ ಶೇರಾ, ಸುರತ್ಕಲ್ ಘಟಕದ ಪ್ರಭಾರ ಘಟಕಾಧಿಕಾರಿ, ರಮೇಶ್, ಪಣಂಬೂರು ಘಟಕದ ಘಟಕಾಧಿಕಾರಿಯಾದ ಹರೀಶ್ ಆಚಾರ್ಯ, ಮುಲ್ಕಿ ಘಟಕದ ಪ್ರಭಾರ ಘಟಕಾಧಿಕಾರಿ ಲೋಕೇಶ್, ಮೂಡಬಿದ್ರೆ ಘಟಕದ ಪ್ರಭಾರ ಘಟಕಾಧಿಕಾರಿ, ಪಾಂಡಿರಾಜ್, ಬಂಟ್ವಾಳ ಘಟಕದ ಪ್ರಭಾರ ಘಟಕಾಧಿಕಾರಿ ಶ್ರೀನಿವಾಸ್ ಆಚಾರ್ಯ, ಬೆಳ್ಳಾರೆ ಘಟಕದ ಘಟಕಾಧಿಕಾರಿಯಾದ ನಾರಾಯಣ, ಬೆಳ್ತಂಗಡಿ ಘಟಕದ ಪ್ರಭಾರ ಘಟಕಾಧಿಕಾರಿ ಜಯಾನಂದ, ಕಡಬ ಘಟಕದ ಘಟಕಾಧಿಕಾರಿ ಹೆಚ್.ಕೆ.ಗೋಪಾಲ್, ಸುಳ್ಯ ಘಟಕದ ಘಟಕಾಧಿಕಾರಿ ಜಯಂತ್ ಶೆಟ್ಟಿ, ಉಪ್ಪಿನಂಗಡಿ ಘಟಕದ ಪ್ರಭಾರ ಘಟಕಾಧಿಕಾರಿ ದಿನೇಶ್, ಪುತ್ತೂರು ಘಟಕದ ಘಟಕಾಧಿಕಾರಿ ಅಭಿಮನ್ಯು ರೈ, ವಿಟ್ಲ ಘಟಕದ ಪ್ರಭಾರ ಘಟಕಾಧಿಕಾರಿ ಸಂಜೀವ, ಸುಬ್ರಹ್ಮಣ್ಯ ಘಟಕದ ಪ್ರಭಾರ ಘಟಕಾಧಿಕಾರಿ ವಿಶ್ವನಾಥ್ ಹಾಗೂ ಕಚೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಸಭೆಯಲ್ಲಿ ಈ ಕೆಳಕಂಡ ವಿಚಾರಗಳ ಬಗ್ಗೆ ಚರ್ಚಿಸಲಾಯಿತು.

1. ಚುನಾವಣಾ ಕರ್ತವ್ಯಕ್ಕೆ ಆಯಾ ಘಟಕಗಳಿಂದ ನಿಯೋಜಿಸುವ ಗೃಹರಕ್ಷಕರ ವಿವರವನ್ನು ಪಡೆಯಲಾಯಿತು.

2. ಈಗಾಗಲೇ ಗುರುತಿನ ಚೀಟಿಯನ್ನು ಮಾಡಿಸದೇ ಇರುವ ಗೃಹರಕ್ಷಕರ ಗುರುತಿನ ಚೀಟಿಯನ್ನು ಕೂಡಲೇ ಮಾಡಿಸಲು ತಿಳಿಸಲಾಯಿತು.

3. ಗೃಹರಕ್ಷಕರಿಗೆ ಅಂಚೆ ಮತ ಪತ್ರದ ಮೂಲಕ ಮತ ಚಲಾಯಿಸುವ ಬಗ್ಗೆ ಘಟಕಾಧಿಕಾರಿಯವರಿಗೆ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಲಾಯಿತು.

4. ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 369 ಗೃಹರಕ್ಷಕರು ಹಾಗೂ ರೈಲ್ವೆ ಇಲಾಖೆಯಲ್ಲಿ 9 ಮತ್ತು ಅಬಕಾರಿ ಇಲಾಖೆಯಲ್ಲಿ 22 ಗೃಹರಕ್ಷಕರು ಒಟ್ಟು 400 ಗೃಹರಕ್ಷಕರನ್ನು ಹೊರತುಪಡಿಸಿ ಬಂದೋಬಸ್ತು ಹಾಗೂ ಇತರೆ ಇಲಾಖೆಗಳಲ್ಲಿ ಕರ್ತವ್ಯದಲ್ಲಿರುವ 400 ಗೃಹರಕ್ಷಕರನ್ನು ಒಟ್ಟು 800 ಗೃಹರಕ್ಷಕರನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸುವ ಬಗ್ಗೆ ಚರ್ಚಿಸಲಾಯಿತು.

error: Content is protected !!

Join the Group

Join WhatsApp Group