ಆಲಂಕಾರು: ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಗರ್ಭಗುಡಿ ಮತ್ತು ನಮಸ್ಕಾರ ಮಂಟಪ ಪುನರ್ ನಿರ್ಮಾಣ ಕುರಿತು ಸಭೆ

(ನ್ಯೂಸ್ ಕಡಬ) newskadaba.com ಕಡಬ ಎ.11. ಆಲಂಕಾರು ಗ್ರಾಮದ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಗರ್ಭಗುಡಿ ಮತ್ತು ನಮಸ್ಕಾರ ಮಂಟಪ ಪುನರ್ ನಿರ್ಮಾಣದ ಉದ್ಧೇಶವಾಗಿ ಸೀಮೆಯ ಭಕ್ತಾಧಿಗಳ ಸಭೆಯನ್ನು ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಅಯೋಜಿಸಲಾಯಿತು.

ವಾಸ್ತು ತಜ್ಞರಾದ ಮಹೇಶ್ ಮುನಿಯಂಗಲ ಮಾತನಾಡಿ ದೇವಸ್ಥಾನ ಎಂದರೆ ಒಂದು ವಿಗ್ರಹದಿಂದ ಆರಂಭ. ದೇವಸ್ಥಾನ ಜೀರ್ಣೋದ್ಧಾರವಾಗಬೇಕಾದರೆ ಒಂದು ಗರ್ಭಗುಡಿಯಿಂದ ಆರಂಭವಾಗಬೇಕೆಂದು ನಿಯಮ. ಗುರ್ಭಗುಡಿಯಿಂದ ಪರಬ್ರಹ ಆಕಾರ, ಹೊರಾಂಗಣ ಎನ್ನುವಂತದ್ದು ಇರುವಂತಹದ್ದು. ಕಣ್ಣಿನಿಂದ ಕಂಡಂತಹ ದೋಷವನ್ನು ಪದೇ ಪದೇ ಪ್ರಶ್ನಾಚಿಂತನೆ ಮಾಡಲಿಕ್ಕಿಲ್ಲವೆಂದು ನಿಯಮ, ಜೋತಿಷ್ಯ ಎನ್ನುವಂತಹದ್ದು ದೇವಾಲಯದ ಸಮಸ್ಯೆಗಳನ್ನು ಕಂಡುಹುಡುಕುವ ಕಣ್ಣಿಂದಂತೆ. ಪ್ರಶ್ನಾಚಿಂತನೆಯನಂತರ ಜೀರ್ಣೋದ್ಧಾರ ಕೆಲಸ ಕಾರ್ಯವನ್ನು ಮಾಡಬೇಕೆಂದರು.

ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎಂ. ಕಮಲಾಕ್ಷ ರೈ ಅಧ್ಯಕ್ಷತೆ ವಹಸಿ ಮಾತನಾಡಿ , ದೇವಾಲಯದಲ್ಲಿ ನಡೆಯುವ ಎಲ್ಲಾ ಕಾರ್ಯಗಳಿಗೆ ಭಕ್ತರು ಕೈಜೋಡಿಸಬೇಕು ಎಂದರು.  ಭಾರತೀ ಹಿರಿಯ ಪ್ರಾಥಮಿಕ ಶಾಲೆ ಆಲಂಕಾರಿನ ರಜತಮಹೋತ್ಸವ ಸಮಿತಿ ಅಧ್ಯಕ್ಷರಾದ ಕೃಷ್ಣಕುಮಾರ್ ಅತ್ರಿಜಾಲು, ದೇವಾಲಲಯದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಗೋಪಾಲಕೃಷ್ಣ ಪಡ್ಡಿಲ್ಲಾಯ, ಮನವಳಿ ಗುತ್ತು ದೈವ ದೇವರುಗಳ ಸೇವಾ ಟ್ರಸ್ಟಿನ ಅಧ್ಯಕ್ಷ ದಯಾನಂದ ರೈ ಮನವಳಿಕೆ ಗುತ್ತು , ಆಲಂಕಾರು ಮೂರ್ತೆದಾರ ಸೇವಾ ಸಹಕಾರಿ ಸಂಘ ಅಧ್ಯಕ್ಷ ಚಂದ್ರಶೇಖರ್ .ಕೆ , ಬೆಳ್ತಂಗಡಿ ಗುರುದೇವ ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ಪ ಪುಜಾರಿ ಎಣ್ಣೆತ್ತೋಡಿ, ಮಟಂತಬೆಟ್ಟು ಮಹೀಷಮರ್ಧಿನಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿರಂಜನ ರೈ ಮಟಂತಬೆಟ್ಟು, ಆಲಂಕಾರು ವರ್ತಕ ಸಂಘದ ಅಧ್ಯಕ್ಷ ಲಕ್ಷ್ಮಿನಾರಾಯಣ ಪ್ರಭು, ಆಲಂಕಾರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸುಧಾಕರ ಪುಜಾರಿ, ಉಧ್ಯಮಿ ರಾಧಾಕೃಷ್ಣ ರೈ ಪರಾರಿಗುತ್ತು ಹಾಗೂ ಇನ್ನಿತರ ಸೀಮೆಯ ಭಕ್ತಾದಿಗಳು ಸಭೆಯಲ್ಲಿ ತಮ್ಮ ತಮ್ಮ ಅಭಿಪ್ರಾಯವನ್ನು ತಿಳಿಸಿದರು.

Also Read  ಹೈಟೆಕ್ ಅಂಗನವಾಡಿ ಕಟ್ಟಡ – “ಅಜ್ಜಿಮನೆ”

ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಗುರುಪ್ರಸಾದ್ ರೈ ಕೇವಳ, ಆನಂದ ಪುಜಾರಿ ಅಗತ್ತಾಡಿ, ಕರಿಯ ಗಾಣಂತಿ, ಅಮೃತ ಜೆ. ರೈ, ಮೀನಾಕ್ಷಿ ಹರೀಶ್ ಪುಜಾರಿ ಉಪಸ್ಥಿತರಿದ್ದರು. ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಉಮೇಶ್ ದೇವಾಡಿಗ ವಂದಸಿದರು. ಸಭೆಯಲ್ಲಿ ಭಕ್ತಾಧಿಗಳ ಅನತಿಯಂತೆ ದೇವಾಲಯದಲ್ಲಿ ಸಾಂಪ್ರದಾಯಿಕ ಅಷ್ಟಮಂಗಲ ಪ್ರಶ್ನಾ ಚಿಂತನೆ ಮಾಡುವುದಾಗಿ ಸಭೆಯಲ್ಲಿ ತೀರ್ಮಾಣಿಸಲಾಯಿತು. ಇದರ ಜವಾಬ್ಧಾರಿ ನಿಭಾಯಿಸಲು 10 ಮಂದಿಯ ತಂಡ ರಚಿಸುವುದಾಗಿ ತೀರ್ಮಾನಿಸಲಾಯಿತು. ಬಳಿಕ ಸಾಂಪ್ರದಾಯಿಕ ಅಷ್ಟಮಂಗಲ ಪ್ರಶ್ನಾ ಚಿಂತನೆಗೆ ಮೂರು ಮಂದಿ ದೈವಜ್ಞರ ಹೆಸರನ್ನು ಬರೆದು ಶ್ರೀದೇವಿಯ ಸನ್ನಿಧಿಯಲ್ಲಿ ಸಮರ್ಪಿಸಿ ಅದರಲ್ಲಿ ದೈವಜ್ಞಾ ಗಣೇಶ್ ಭಟ್ ಮೂಳಿಯರವರನ್ನು ಅಷ್ಟಮಂಗಲ ಪ್ರಶ್ನಾ ಚಿಂತನೆಗೆ ನೇಮಕ ಮಾಡಲಾಯಿತು.

Also Read  ಅಖಿಲಭಾರತ ಅಂತರ್ ವಿಶ್ವವಿದ್ಯಾಲಯ ಅಥ್ಲೆಟಿಕ್ ಚಾಂಪಿಯನ್ ಶಿಪ್

error: Content is protected !!
Scroll to Top