ಯುವವಾಹಿನಿ ಕೇಂದ್ರ ಸಮಿತಿ: ಕಡಬ ಘಟಕಕ್ಕೆ ಪದಾಧಿಕಾರಿಗಳ ಆಯ್ಕೆ ► ಅಧ್ಯಕ್ಷ: ಯೋಗೀಶ್ ಕುಮಾರ್, ಕಾರ್ಯದರ್ಶಿ: ಮಿಥುನ್

(ನ್ಯೂಸ್ ಕಡಬ) newskadaba.com ಕಡಬ, ಎ.2. ಯುವಜನರಲ್ಲಿ ನಾಯಕತ್ವ ಗುಣ, ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಾದರ್ಶಪಾಲನೆ, ಯುವಜನಾಂಗವನ್ನು ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ರಾಜಕೀಯ ಮತ್ತು ಆರ್ಥಿಕ ಅಭಿವೃದ್ದಿಗಾಗಿ ಸಂಘಟಿಸುವುದು ಸಮಾಜದಲ್ಲಿ ವಿಶಿಷ್ಟ ಕ್ಷೇತ್ರದಲ್ಲಿ ಸಾಧನೆಗೈದ ಸಮಾಜ ಭಾಂದವರನ್ನು ಗುರುತಿಸುವುದು, ಯುವ ಜನರ ಪ್ರತಿಭಾವಿಕಾಸನಕ್ಕೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿವೇತನ ಹಾಗೂ ಉನ್ನತ ವ್ಯಾಸಂಗದ ಬಗ್ಗೆ ಮಾಹಿತಿ ನೀಡುವುದು, ಸಮಾಜದ ಪ್ರತಿಯೊಬ್ಬರಲ್ಲಿಯೂ ಏಕತೆ, ಸಮಗ್ರತೆ ಹಾಗೂ ಸಹೋದರತಾ ಭಾವನೆಯನ್ನು ಬೆಳೆಸುವುದು ಸಮಾಜದ ಯುವಜನತೆಗೆ ಉದ್ಯೋಗವಕಾಶಗಳ ಬಗ್ಗೆ ಮಾಹಿತಿ, ಸ್ಪರ್ಧಾತ್ಮಕ ಹಾಗೂ ಆಡಳಿತಾತ್ಮಕ ಪರೀಕ್ಷೆಗಳ ಬಗ್ಗೆ ಅಬ್ಯರ್ಥಿಗಳಿಗೆ ತರಬೇತಿ ಮಾರ್ಗದರ್ಶನ ಬೆಂಬಲ ನೀಡುವುದು ಮುಂತಾದ ಹತ್ತು ಹಲವು ಸಮಾಜಮುಖಿ ಉದ್ದೇಶವನ್ನು ಇಟ್ಟುಕೊಂಡು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ಕಡಬ ಘಟಕಕ್ಕೆ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ಕಡಬ ಶ್ರೀ ದುರ್ಗಾಂಬಿಕಾ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.

Also Read  ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈಗೆ ತಪ್ಪಿದ ಮೂಡುಬಿದಿರೆ ಕ್ಷೇತ್ರದ ಟಿಕೆಟ್ ► ಬೇಸತ್ತ ಯುವ ಕಾಂಗ್ರೆಸ್ ಪದಾಧಿಕಾರಿಗಳಿಂದ ಸಾಮೂಹಿಕ ರಾಜೀನಾಮೆ

ಅಧ್ಯಕ್ಷರಾಗಿ ಯೋಗೀಶ್ ಕುಮಾರ್ ಅಗತ್ತಾಡಿ, ಉಪಾಧ್ಯಕ್ಷರಾಗಿ ಸತೀಶ್ ಜಿ ಗೋವಿಂದಕಟ್ಟೆ, ಕಾರ್ಯದರ್ಶಿಯಾಗಿ ಮಿಥುನ್, ಸುಂದರ್ ಪಲ್ಲತ್ತಡ್ಕ, ಜತೆ ಕಾರ್ಯದರ್ಶಿಯಾಗಿ ಅಭಿಲಾಷ್ ಪಿ.ಕೆ, ಕೋಶಾಧಿಕಾರಿಯಾಗಿ ಜನಾರ್ಧನ ಬಿ.ಎಲ್ ಹಾಗೂ ನಿದೇಶಕರುಗಳಾಗಿ ನಾರಾಯಣ ಗುರು ತತ್ವ ಅನುಷ್ಠಾನ: ವಸಂತ ಪುಜಾರಿ ಬದಿಬಾಗಿಲು, ಕ್ರೀಡಾ ನಿರ್ದೇಶಕರು: ರಾಜೇಶ್ ಪುಜಾರಿ ದೋಳ, ಸಮಾಜ ಸೇವೆ: ಆನಂದ ಟೈಲರ್ ಕಡಬ, ವ್ಯಕ್ತಿತ್ವ ವಿಕಸನ: ಗಣೇಶ್ ನಡುವಾಲು, ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ: ದಯಾನಂದ ಆಲಂಕಾರು, ಮಹಿಳಾ ಸಂಘಟನಾ ನಿರ್ದೇಶಕರು: ಶಿಲ್ಪಾ ಕೆ.ಎಸ್. ಕಲೆ ಮತ್ತು ಸಾಹಿತ್ಯ: ವಿನೋದ್ ಇಚ್ಲಂಪಾಡಿ, ವಿದ್ಯಾನಿಧಿ: ಸುಂದರ ಕರ್ಕೇರ ಮರ್ದಾಳ, ವಿದ್ಯಾರ್ಥಿ ಸಂಘಟನೆ: ಲತೀಶ ಕಂಪ, ಪ್ರಚಾರ ನಿರ್ದೇಶಕರು: ಸತೀಶ್ ಪಟ್ಟೆ, ಆರೋಗ್ಯ ನಿರ್ದೇಶಕರು: ಲಕ್ಷ್ಮೀಶ ಬಂಗೇರ ಪೆಲತ್ತೋಡಿ. ಸಂಘಟನಾ ಕಾರ್ಯದರ್ಶಿಗಳಾಗಿ: ಶಿವಪ್ರಸಾದ್ ಎಡಮಂಗಳ, ತಾರಾನಾಥ ಮರ್ದಾಳ, ಸಂದೇಶ್ ಪಿ.ಬಿ, ವಿಜಯಾ ಆಲಂಕಾರು, ಅಶ್ವಥ್ ಸಾಂತ್ಯ, ಭಾಸ್ಕರ ಪುಜಾರಿ ಸನಿಲ, ಸುಂದರ ಪುಜಾರಿ ಕುದುಂಬೂರು, ನಾರಾಯಣ ಹಳೆನೇರೆಂಕಿ, ಲಿಂಗಪ್ಪ ಪುಜಾರಿ ನೆಯ್ಯಲ್ಗ, ಜಯಪ್ರಕಾಶ್ ದೋಳ. ಸಲಹೆಗಾರರಾಗಿ ಜಿನ್ನಪ್ಪ ಸಾಲ್ಯಾನ್ ಕಡಬ, ಚಂದ್ರಶೇಖರ ಆಲಂಕಾರು, ಸದಾನಂದ ಆಲಂಕಾರು, ಸತೀಶ್ ಮರ್ದಾಳರವರುಗಳು ಆಯ್ಕೆಯಾಗಿದ್ದಾರೆ.

Also Read  ಮಂಗಳೂರು: ಕಳೆದುಹೋದ ಮೊಬೈಲ್ ಪತ್ತೆಗಾಗಿ ವಾಟ್ಸಪ್ ಸಹಾಯ ವಾಣಿ

ಈ ಸಂದರ್ಭದಲ್ಲಿ ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ಕಾರ್ಯದರ್ಶಿಯವರಾದ ರಾಜೇಶ್ ಸುವರ್ಣ, ಕೇಂದ್ರ ಸಮಿತಿ ಮಾಜಿ ಅಧ್ಯಕ್ಷರುಗಳಾದ ಪರಮೇಶ್ವರ ಪುಜಾರಿ, ಡಾ. ಸದಾನಂದ ಕುಂದರ್, ಕೇಂದ್ರ ಸಮಿತಿ ಸಂಘಟನಾ ಕಾರ್ಯದರ್ಶಿಯವರಾದ ಶೇಖರ ಗೌಡತ್ತಿಗೆ, ಮಂಗಳೂರು ಘಟಕದ ಅಧ್ಯಕ್ಷರಾದ ನವೀನ್ ಚಂದ್ರ, ಉಪ್ಪಿನಂಗಡಿ ಘಟಕದ ಉಪಾಧ್ಯಕ್ಷರಾದ ಅಜೀತ್ ಕುಮಾರ್ ಪಾಲೇರಿ ಇವರುಗಳು ಉಪಸ್ಥಿತರಿದ್ದರು.

error: Content is protected !!
Scroll to Top