ನರಿಮೊಗರು: ವೃತ್ತಿ ತರಬೇತಿ ಕಾರ್ಯಾಗಾರ

(ನ್ಯೂಸ್ ಕಡಬ) newskadaba.com ಸವಣೂರು, ಮಾ.28. ಭಾರತ ಸರಕಾರದ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಮಂಗಳೂರು, ಜಿಲ್ಲಾ ಪ್ರಶಸ್ತಿ ಪುರಸ್ಕ್ರತ ಪ್ರಖ್ಯಾತಿ ಯುವತಿ ಮಂಡಲ ನರಿಮೊಗರು ಇದರ ಆಶ್ರಯದಲ್ಲಿ ಉಚಿತ ಹೊಲಿಗೆ ತರಬೇತಿ ಕಾರ್ಯಾಗಾರವನ್ನು ತರಬೇತುದಾರೆ ಬೇಬಿ ಕುಮಾರಮಂಗಲ ಉದ್ಘಾಟಿಸಿದರು.

ಅಧ್ಯಕ್ಷತೆ ವಹಿಸಿದ್ದ ಯುವತಿ ಮಂಡಲದ ಗೌರವಾಧ್ಯಕ್ಷೆ ವಿದ್ಯಾ ನಾಯಕ್ ಮಾತನಾಡಿ, ಇಲ್ಲಿನ ಯುವತಿ ಮಂಡಲವು ಆತ್ಯುನ್ನತ ಕಾರ್ಯ ಚಟುವಟಿಕೆಯಿಂದ ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರದಿಂದ ಜಿಲ್ಲಾ ಅಯಗುತ್ತಮ ಸಂಘ ಪ್ರಶಸ್ತಿ ಪಡೆದುಕೊಂಡಿದೆ. ಸಮಾಜಮುಖಿ ಚಿಂತನೆಯ ಸಂಘಟನೆಗೆ ಜನರ ಸಹಕಾರವೂ ದೊರಕುತ್ತದೆ ಎಂದರು.ಯುವತಿ ಮಂಡಲದ ಅಧ್ಯಕ್ಷೆ ಗುರುಪ್ರಿಯಾ ನಾಯಕ್ ಮಾತನಾಡಿ, ತರಬೇತಿ ಕಾರ್ಯಾಗಾರದ ಔಚಿತ್ಯವನ್ನು ವಿವರಿಸಿದರು.ಹಾಗೂ ಈಗಾಗಲೇ 30 ಮದಿ ನೊಂದಾಯಿಸಿದ್ದಾರೆ ಎಂದರು. ಯೋಜನೆಯು ಯಶಸ್ವಿಯಾಗಲು ಸಮುದಾಯದ ಸಹಕಾರ ಅತ್ಯಗತ್ಯ ಎಂದರು.

Also Read  ಸುರತ್ಕಲ್: ಬೈಕ್ ಗಳಿಗೆ ಕಂಟೈನರ್ ಲಾರಿ ಢಿಕ್ಕಿ ➤ ಮೂವರಿಗೆ ಗಾಯ  

ನೆಹರು ಯುವ ಕೇಂದ್ರದ ತಾಲೂಕು ಸಂಯೋಜಕಿ ಜಿಸ್ಮಿತಾ ಕೆ.ಆರ್ ಅವರು ನೆಹರು ಯುವ ಕೇಂದ್ರದ ಯೋಜನೆಗಳ ಕುರಿತು ಮತ್ತು ಉದ್ದೇಶಗಳ ಕುರಿತು ವಿವರಿಸಿದರು. ವೇದಿಕೆಯಲ್ಲಿ ಧರ್ಮಸ್ಥಳ ಗ್ರಾಮಭಿವೃದ್ದಿ ಯೋಜನೆಯ ಸೇವಾ ಪ್ರತಿನಿಧಿ ಪೂಜಾ ವಸಂತ್, ನರಿಮೊಗರು ಎ ಒಕ್ಕೂಟದ ಉಪಾಧ್ಯಕ್ಷೆ ಸರೋಜಿನಿ ಉಪಸ್ಥಿತರಿದ್ದರು. ಯುವತಿ ಮಂಡಲದ ಸದಸ್ಯೆ ಪ್ರಿಯಾ ಎಂ. ಕೂಡುರಸ್ತೆ ಸ್ವಾಗತಿಸಿ, ವಂದಿಸಿದರು.

error: Content is protected !!
Scroll to Top