(ನ್ಯೂಸ್ ಕಡಬ) newskadaba.com ಸವಣೂರು, ಮಾ.27. ಬೆಳಂದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಅಬೀರ ಅಂಗನವಾಡಿ ಕೇಂದ್ರದಲ್ಲಿ ನೂತನ ಬಾಲವಿಕಾಸ ಸಮಿತಿಯನ್ನು ರಚನೆ ಮಾಡಲಾಯಿತು.

ನೂತನ ಬಾಲವಿಕಾಸ ಸಮಿತಿಯ ಅಧ್ಯಕ್ಷರಾಗಿ ವಿಮಲ ಎನ್.ಎಮ್. ರವರು ಆಯ್ಕೆಯಾಗಿದ್ದಾರೆ. ಗ್ರಾಮ ಪಂಚಾಯತ್ ಪ್ರತಿನಿಧಿಯಾಗಿ ಪಂಚಾಯತ್ ಸದಸ್ಯರಾದ ಜಯಂತ ಅಬೀರ, ಶಾಲಾ ಮುಖ್ಯೋಪಾಧ್ಯಾಯರಾದ ಪುಂಡಲೀಕ ಪೂಜಾರ, ಆಶಾ ಕಾರ್ಯಕರ್ತೆ ಕುಸುಮ, ಅಂಗನವಾಡಿ ವ್ಯಾಪ್ತಿಗೆ ಬರುವ ಪ್ರಾಯಪೂರ್ವ ಬಾಲಕಿ ಮೋಹಿನಿ, ಮಕ್ಕಳ ತಾಯಂದಿರ ಪರವಾಗಿ ಜಯಶ್ರೀ ಮತ್ತು ಸೀತಾ, ಅಂಗನವಾಡಿ ಫಲಾನುಭವಿಯ ತಂದೆ ಗಿರಿಯಪ್ಪ ಮಾದೋಡಿ, ಅಂಗನವಾಡಿ ಫಲಾನುಭವಿಯ ಹಿರಿಯರ ಪ್ರತಿನಿಧಿಯಾಗಿ ಲೀಲಾವತಿ ಅಬೀರ, ಸ್ವಯಂ ಸೇವಾ ಪ್ರತಿನಿಧಿಯಾಗಿ ಪದ್ಮಯ ಹೊಸೊಕ್ಲು, ಸ್ತ್ರೀ ಶಕ್ತಿ ಸಂಘಗಳ ಪ್ರತಿನಿಧಿಯಾಗಿ ಕಾವ್ಯ ಕಂಡೂರು, ಮತ್ತು ಸಮಿತಿಯ ಕಾರ್ಯದರ್ಶಿಯಾಗಿ ಅಂಗನವಾಡಿ ಕಾರ್ಯಕರ್ತೆ ಬೇಬಿರವರನ್ನು ಆಯ್ಕೆ ಮಾಡಲಾಯಿತು.
