(ನ್ಯೂಸ್ ಕಡಬ) newskadaba.com ಸವಣೂರು, ಮಾ.27. ಬೆಳಂದೂರು ಗ್ರಾಮದ ಬೂತ್ 2ರ ಬಿಜೆಪಿ ಸಮಿತಿಯ ಸಭೆಯು ಪ್ರತಿ 10 ದಿನಗಳಿಗೊಮ್ಮೆ ಪಕ್ಷದ ಕಾರ್ಯಕರ್ತರ ಮನೆಗಳಲ್ಲಿ ನಡೆಯುತ್ತಿದ್ದು ಈ ಬಾರಿಯ ಸಭೆಯು ಬಿಜೆಪಿ ಪಂಚಾಯತ್ ಸಮಿತಿಯ ಮಹಿಳಾ ಮೊರ್ಛದ ಕಾರ್ಯದರ್ಶಿಯಾದ ಚಂಪಾ ಕುಶಾಲಪ್ಪ ಗೌಡರ ಮನೆಯಲ್ಲಿ ಬೂತ್ ಸಮಿತಿಯ ಅಧ್ಯಕ್ಷರಾದ ಪ್ರಮೋದ್ ನೀರಜರಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಪಕ್ಷದ ಸಂಘಟನೆಯ ಬಗ್ಗೆ ಚರ್ಚೆ ನಡೆಸಿ ಪೇಜ್ ಪ್ರಮುಖರ ನೇಮಕ ಮಾಡಲಾಯಿತು. ಚುನಾವಣಾ ಪೂರ್ವ ಚಟುವಟಿಕೆಯ ಬಗ್ಗೆ ಚರ್ಚೆ ಮಾಡಲಾಯಿತು.

ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಜನಾತ ಬಜಾರ್ ಇದರ ಅಧ್ಯಕ್ಷರಾದ ಉದಯ ರೈ ಮಾದೋಡಿ, ಬೆಳಂದೂರು ಜಿಲ್ಲಾ ಪಂಚಾಯಿತಿ ಸದಸ್ಯೆಯಾದ ಪ್ರಮೀಳಾ ಜನಾರ್ದನ, ಗ್ರಾಮ ಪಂಚಾಯತ್ ಸದಸ್ಯರಾದ ಜಯಂತ ಅಬೀರ, ರತ್ನಾವತಿ ಅಬೀರ, ಮಾಜಿ ತಾಲೂಕು ಪಂಚಾಯಿತಿ ಉಪಾಧ್ಯಕ್ಷರಾದ ಬಾಬು ಮಾದೋಡಿ, ಚಂದ್ರಯ್ಯ ಆಚಾರ್ಯ, ಕುಶಾಲಪ್ಪ ಗೌಡ, ಜನಾರ್ದನ ಅಚಾರ್ಯ ಇನ್ನಿತರರು ಭಾಗವಹಿಸಿದ್ದರು. ಮುಂದಿನ ಬಾರಿಯ ಸಭೆಯನ್ನು ಉದಯ ರೈ ಮಾದೋಡಿಯವರ ಮನೆಯಲ್ಲಿ ಮಾಡುವುದಾಗಿ ತೀರ್ಮಾನ ಮಾಡಲಾಯಿತು. ಬೂತ್ ಸಮಿತಿಯ ಕಾರ್ಯದರ್ಶಿ ಯೋಗೀಶ್ ಕರೆಮನೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
