ಪುಂಜಾಲಕಟ್ಟೆ: ಅಟೋರಿಕ್ಷಾ – ಬೈಕ್ ಢಿಕ್ಕಿ ► ಸವಾರರಿಗೆ ಗಾಯ

(ನ್ಯೂಸ್ ಕಡಬ) newskadaba.com ಪುಂಜಾಲಕಟ್ಟೆ, ಮಾ.27. ಅಟೋರಿಕ್ಷಾವೊಂದು ಮೋಟಾರು ಸೈಕಲಿಗೆ ಡಿಕ್ಕಿ ಹೊಡೆದ ಪರಿಣಾಮ ಸವಾರರು ಗಾಯಗೊಂಡಿರುವ ಘಟನೆ ಪುಂಜಾಲಕಟ್ಟೆಯಲ್ಲಿ ನಡೆದಿದೆ.

ಗಾಯಾಳುಗಳನ್ನು ಮೋಟಾರು ಸೈಕಲ್ ಸವಾರ ಉಮೇಶ್ ಹಾಗೂ ಸಹಸವಾರ ತೆಂಕಕಜೆಕಾರು ಗ್ರಾಮ ನಿವಾಸಿ  ಚಂದ್ರ ಎಂದು ಗುರುತಿಸಲಾಗಿದೆ. ಇವರು ಉಮೇಶ್ ಎಂಬವರ  ಮೋಟಾರು ಸೈಕಲ್ನಲ್ಲಿ ಮಡಂತ್ಯಾರು ಕಡೆಯಿಂದ ಪಾಂಡವರಕಲ್ಲಿಗೆ ಹೋಗುತ್ತಿರುವಾಗ,   ಬಂಟ್ವಾಳ ತಾಲೂಕು ಬಡಗಕಜೆಕಾರು ಗ್ರಾಮದ ಕೊಮಿನಡ್ಕ ಎಂಬಲ್ಲಿ ಈ ಘಟನೆಯು ಸಂಧವಿಸಿದೆ.

ವಿರುದ್ದ ದಿಕ್ಕಿನಿಂದ ಅಟೋ ರಿಕ್ಷಾವನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ಮೋಟಾರು ಸೈಕಲಿಗೆ ಡಿಕ್ಕಿ ಹೊಡೆದ ಪರಿಣಾಮ ಸಹಸವಾರರ ಬಲ ಕಾಲಿನ ಪಾದಕ್ಕೆ, ಬೆರಳಿಗೆ ಹಾಗೂ ಎಡ ಭಾಗದ ಹಣೆಗೆ ಗಾಯವಾಗಿದೆ. ಬೈಕ್ ಸವಾರರಾದ ಉಮೇಶ್‌ರವರಿಗೆ ಬಲ ಕಾಲಿನ ತೊಡೆಗೆ, ಬಲಕಾಲಿನ ಪಾದ, ಬೆರಳಿಗೆ, ಮತ್ತು ಬಲ ಕೈಗೆ ಏಟಾಗಿದೆ. ಗಾಯಾಳುಗಳನ್ನು ಕೆ.ಎಂ.ಸಿ ಅತ್ತಾವರ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

Also Read  ಲಸಿಕೆ ಹಾಗೂ ಪ್ರಮಾಣಪತ್ರಕ್ಕೆ ಬಲಪಡಿಸುವಂತಿಲ್ಲ..! ➤ ಕೇಂದ್ರ ಸ್ಪಷ್ಟನೆ

error: Content is protected !!
Scroll to Top