(ನ್ಯೂಸ್ ಕಡಬ) newskadaba.com ಕೊೖಲ, ಮಾ.26. ಕಡಬ ತಾಲೂಕಿನ ಕೊೖಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆನೆಗುಂಡಿ ದಲಿತ ಕಾಲೋನಿಗೆ ಕುಡಿಯುವ ನೀರಿನ ಯೋಜನೆ ಅನುಷ್ಟಾನಕ್ಕಾಗಿ ಸುಳ್ಯ ಶಾಸಕ ಎಸ್.ಅಂಗಾರ 3.5 ಲಕ್ಷ ರೂ ಅನುದಾನ ಮಂಜೂರುಗೊಳಿಸಿದ್ದು, ಭಾನುವಾರ ಕೊಳವೆ ಬಾವಿ ಕೊರೆಯಲು ಪ್ರಾರಂಭಿಸುವ ಮೂಲಕ ಯೋಜನೆಗೆ ಚಾಲನೆ ದೊರೆಯಿತು.
ಶಾಸಕರ ಅನುದಾನದಲ್ಲಿ ನಡೆಯುವ ಕಾಮಗಾರಿಗೆ ಕೊೖಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೇಮಮೋಹನ್ದಾಸ್ ಶೆಟ್ಟಿ ಬೆಳಿಗ್ಗೆ ಕಾಮಗಾರಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕೊೖಲ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಾಲಕೃಷ್ಣ ಗೌಡ ಬೇಂಗದಪಡ್ಪು, ಸದಸ್ಯ ವಿನೋಧರ ಗೌಡ, ಎ.ಪಿ.ಎಂ.ಸಿ ಮಾಜಿ ನಿರ್ದೆಶಕ ಶೀನಪ್ಪ ಗೌಡ ವಳಕಡಮ, ಆಲಂಕಾರು ಸಿ.ಎ ಬ್ಯಾಂಕ್ ನಿರ್ದೆಶಕಿ ಮಮತಾ ಯಧುಶ್ರೀ, ಸಾಮಾಜಿಕ ಮುಂದಾಳು ಯಧುಶ್ರೀ ಆನೆಗುಂಡಿ, ಸ್ಥಳೀಯ ನಿವಾಸಿಗಳಾದ ಮಾಯಿಲ ಮುಗೇರ, ಕೊರಗು ಮುಗೇರ, ಡೊಂಬಂಯ್ಯ ಮುಗೇರ ಮೊದಲಾದವರು ಉಪಸ್ಥಿತರಿದ್ದರು.