ನಾಲ್ಕು ಫ್ಯಾಕ್ಟರಿಗೆ ಬೀಗ ಜಡಿಯಲಿರುವ ಪೆಪ್ಸಿಕೊ..!

(ನ್ಯೂಸ್ ಕಡಬ) newskadaba.com ಅ. 31. ಕಾರ್ಯಾಚರಣೆಗಳನ್ನು ಸುಗಮಗೊಳಿಸುವ ನಿಟ್ಟಿನಲ್ಲಿ 4 ಯುಎಸ್ ಬಾಟ್ಲಿಂಗ್ ಪ್ಲಾಂಟ್‌ ಗಳನ್ನು ಮುಚ್ಚಲು ಮತ್ತು ಸುಮಾರು 400 ಕಾರ್ಮಿಕರನ್ನು ವಜಾಗೊಳಿಸಲು ಪೆಪ್ಸಿಕೋ ಯೋಜಿಸಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.

 

ಷೇರು ವಿನಿಮಯ ಕೇಂದ್ರಕ್ಕೆ ಪೆಪ್ಸಿಕೋ ನೀಡಿದ ಮಾಹಿತಿ ಪ್ರಕಾರ, ಅಮೆರಿಕದ ಸಿನ್ಸಿನಾಟಿ, ಚಿಕಾಗೋ, ಪೆನ್​ ಸಿಲ್ವೇನಿಯಾ ಮತ್ತು ಅಟ್ಲಾಂಟಾದ ಬಾಟ್ಲಿಂಗ್ ಯೂನಿಟ್ ​ಗಳು ಮುಚ್ಚಲ್ಪಡುತ್ತಿರುವುದಾಗಿ ಹೇಳಲಾಗಿದೆ. ಇವುಗಳ ಪೈಕಿ ಚಿಕಾಗೋ ಯೂನಿಟ್ ಪೂರ್ಣವಾಗಿ ಬಂದ್ ಆಗಲಿದ್ದು, ಇನ್ನುಳಿದ ಮೂರು ಘಟಕಗಳಲ್ಲಿ ಬಾಟ್ಲಿಂಗ್ ಯೂನಿಟ್ ಮಾತ್ರವೇ ಮುಚ್ಚಲಾಗುತ್ತದೆ. ವ್ಯಾಪಾರ ಕಡಿಮೆಯಾಗುತ್ತಿರುವ ಕಾರಣ, ಅದನ್ನು ಸರಿದೂಗಿಸಲು ಮತ್ತು ಅನಗತ್ಯ ವೆಚ್ಚ ಕಡಿಮೆ ಮಾಡಲು ಬಾಟ್ಲಿಂಗ್ ಪ್ಲಾಂಟ್ಸ್ ಮುಚ್ಚುತ್ತಿದೆ ಎಂದು ಹೇಳಲಾಗಿದೆ.

error: Content is protected !!
Scroll to Top