ಕರ್ಪೂರದ ಆರೋಗ್ಯ ಪ್ರಯೋಜನಗಳು..!

(ನ್ಯೂಸ್ ಕಡಬ) newskadaba.com ಅ. 31. ಪೂಜಾ ಕಾರ್ಯಕ್ಕೆ ಹೆಚ್ಚಾಗಿ ಬಳಸುವ ಕರ್ಪೂರವನ್ನು ಪೂಜೆಯ ಹೊರತಾಗಿ ಇನ್ನಿತರ ಹಲವಾರು ಆರೋಗ್ಯ ಮತ್ತು ಸೌಂದರ್ಯವರ್ಧಕಗಳನ್ನಾಗಿಯೂ ಬಳಸಬಹುದು. ಜೊತೆಗೆ ವಿಜ್ಞಾನದ ಸರಳ ಪ್ರಯೋಗಗಳನ್ನು ಮಾಡಲೂ ಬಳಸಲಾಗುತ್ತದೆ. ಇದರ ವೈಜ್ಞಾನಿಕ ಹೆಸರು Cinnamomum Camphor. ಕರ್ಪೂರದಿಂದ ಏನೆಲ್ಲಾ ಉಪಯೋಗಗಳಿವೆ ಎಂಬುವುದನ್ನು ನೋಡೋಣ.

ಆರೋಗ್ಯ ಪ್ರಯೋಜನಗಳು:

ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಕರ್ಪೂರ ಪರಿಹಾರ ನೀಡುತ್ತದೆ.
ಇದು ಸ್ನಾಯು ಮತ್ತು ಕೀಲುಗಳಿಗೆ ಸಂಬಂಧಪಟ್ಟ ನೋವುಗಳಿಗೆ ಪರಿಹಾರ ನೀಡುತ್ತದೆ.
ಕರ್ಪೂರವನ್ನು ಬಿಸಿ ನೀರಿಗೆ ಹಾಕಿ ಅದರ ಹಬೆ ತೆಗೆದುಕೊಳ್ಳುವುದರಿಂದ ತೆಲೆನೋವು ವಾಸಿಯಾಗುತ್ತದೆ.
ಇದು ಶ್ವಾಸಕೋಶದ ಸೋಂಕನ್ನು ನಿವಾರಣೆ ಮಾಡುತ್ತದೆ.
ಪೂಜಾ ಸಮಯದಲ್ಲಿ ಬಳಸುವ ಕರ್ಪೂರವು ಅನೇಕ ರೋಗಗಳಿಂದ ನಿಮ್ಮನ್ನು ರಕ್ಷಿಸಲು ಸಹಾಯ ಮಾಡುತ್ತದೆ.
ಕರ್ಪೂರದ ಬಳಕೆಯು ಉಸಿರಾಟದ ಸಮಸ್ಯೆಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.
ಕರ್ಪೂರವನ್ನು ಬಿಸಿ ನೀರಿನಲ್ಲಿ ಹಾಕಿ ಅದರಲ್ಲಿ ಕಾಲುಗಳನ್ನು ಇಟ್ಟು ಕುಳಿತುಕೊಳ್ಳುವುದರಿಂದ ಒಡೆದ ಹಿಮ್ಮಡಿಗಳಿಂದ ಪರಿಹಾರ ಪಡೆದುಕೊಳ್ಳಬಹುದು.
ಕರ್ಪೂರವನ್ನು ಗಾಯವಾದ ಸ್ಥಳಕ್ಕೆ ಹಚ್ಚುವುದರಿಂದ ಗಾಯ ಬೇಗ ವಾಸಿಯಾಗುತ್ತದೆ.
ನಿಮ್ಮ ತಲೆಯಲ್ಲಿ ತುರಿಕೆ ಹೆಚ್ಚಾಗಿದ್ದರೆ, ತೆಂಗಿನ ಎಣ್ಣೆಯಲ್ಲಿ ಕರ್ಪೂರವನ್ನು ಬೆರೆಸಿ ತಲೆಹೆ ಮಸಾಜ್ ಮಾಡಿ, ಈ ರೀತಿ ಮಾಡುವುದರಿಂದ ಎಷ್ಟೇ ತುರಿಕೆ ಇದ್ದರೂ ಕಡಿಮೆಯಾಗುತ್ತದೆ.

error: Content is protected !!
Scroll to Top