ಕನ್ನಡ ರಾಜ್ಯೋತ್ಸವ ಪ್ರಶಸ್ತಿ-2024 ಪ್ರಕಟ; ಸಾಧಕರ ಪಟ್ಟಿ ಇಲ್ಲಿವೆ

(ನ್ಯೂಸ್ ಕಡಬ) newskadaba.com ಅ. 31. ರಾಜ್ಯದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ-2024 ಘೋಷಣೆಯಾಗಿದ್ದು, ರಾಜ್ಯದ 69 ಸಾಧಕರಿಗೆ ನವೆಂಬರ್ 1ರಂದು ನಡೆಯಲಿರುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುತ್ತದೆ.

ಈ ಕುರಿತು ಬುಧವಾರದಮದು ಪತ್ರಿಕಾಗೋಷ್ಠಿ ನಡೆಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ-2024 ಪಟ್ಟಿಯನ್ನು ಪ್ರಕಟಿಸಿದರು. ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಗಾಗಿ ಒಟ್ಟು 1,575 ಭೌತಿಕ ಅರ್ಜಿಗಳು ಬಂದಿದ್ದವು. ಇದಲ್ಲದೇ ಸೇವಾಸಿಂಧು ಮೂಲಕ 1,309 ಜನರಿಗಾಗಿ 7,438 ನಾಮನಿರ್ದೇಶನಗಳು ಸಲ್ಲಿಕೆಯಾಗಿದ್ದವು. ಇವುಗಳನ್ನೆಲ್ಲಾ ಕೂಲಂಕುಷವಾಗಿ ಪರಿಶೀಲನೆ ಮಾಡಿ ಅರ್ಹರ ಆಯ್ಕೆ ಮಾಡಲಾಗಿದೆ ಎಂದರು.

ಕನ್ನಡ ರಾಜ್ಯೋತ್ಸವದಂದು 69 ಸಾಧಕರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಪ್ರತಿಯೊಂದು ಜಿಲ್ಲೆಗೂ ಪ್ರಾತಿನಿಧ್ಯವನ್ನು ನೀಡಲಾಗಿದೆ ಹಾಗೂ ಸಾಮಾಜಿಕ ನ್ಯಾಯವನ್ನು ಕಾಪಾಡಿಕೊಳ್ಳಲಾಗಿದೆ. ಈ ವರ್ಷ ಕರ್ನಾಟಕ ನಾಮಕರಣದ ಸುವರ್ಣ ಮಹೋತ್ಸವ ವರ್ಷವಾಗಿರುವುದರಿಂದ ಇದನ್ನು ವಿಶೇಷ ಸಂದರ್ಭ ಎಂದು ಪರಿಗಣಿಸಿ ಸುವರ್ಣ ಸಂಭ್ರಮ-50ರ ಸುವರ್ಣ ಮಹೋತ್ಸವ ಎಂಬ ವಿಶೇಷ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

50 ಸಾಧಕ ಮಹಿಳೆಯರಿಗೆ ಮತ್ತು 50 ಪುರುಷರಿಗೆ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಇದರಿಂದ 69 + 100 ಒಟ್ಟು 169 ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಅರ್ಜಿಯನ್ನು ಹಾಕದ ಎಲೆಮರೆಯ ಕಾಯಿಯಂತೆ, ಸೇವೆ ಸಲ್ಲಿಸಿರುವ 20ಕ್ಕೂ ಹೆಚ್ಚು ಮಂದಿಯನ್ನು ಸಹ ಗುರುತಿಸಿ, ಪ್ರಶಸ್ತಿ ನೀಡಲಾಗುತ್ತಿದೆ.

Also Read  ದ್ವಿತೀಯ ಪಿಯುಸಿ ಪರೀಕ್ಷಾ ವಿದ್ಯಾರ್ಥಿಗಳಿಗೆ ಸೂಚನೆ       ➤ ಈ ನಿಯಮ ಪಾಲನೆ ಕಡ್ಡಾಯ

ಪ್ರಶಸ್ತಿ ಪುರಸ್ಕೃತರ ಪಟ್ಟಿ

ಶಿಲ್ಪಕಲೆ: ಬಸವರಾಜ್ ಬಡಿಗೇರ, ಅರುಣ್ ಯೋಗಿರಾಜ್

ಚಿತ್ರಕಲೆ: ಪ್ರಭು ಹರಸೂರು

ಕರಕುಶಲ: ಚಂದ್ರಶೇಖರ ಸಿರಿವಂತೆ (ಹಸೆಚಿತ್ತಾರ)

ಬಯಲಾಟ: ನಾರಾಯಣಪ್ಪ ಶಿಳ್ಳೇಕ್ಯಾತ

ಜಾನಪದ: ನರಸಿಂಹಲು

ಚಲನಚಿತ್ರ/ ಕಿರುತೆರೆ: ಹೇಮಾ ಚೌದರಿ, ಎಂ. ಎಸ್. ನರಸಿಂಹಮೂರ್ತಿ

ಸಂಗೀತ : ಪಿ. ರಾಜಗೋಪಾಲ, ಎ. ಎನ್. ಸದಾಶಿವಪ್ಪ

ನೃತ್ಯ: ವಿದುಷಿ ಲಲಿತಾ ರಾವ್

ಆಡಳಿತ: ಎಸ್. ವಿ ರಂಗನಾಥ್

ವೈದ್ಯಕೀಯ: ಡಾ. ಜಿ. ಬಿ. ಬಿಡಿನಹಾಳ, ಡಾ. ಮೈಸೂರು ಸತ್ಯನಾರಾಯಣ, ಡಾ. ಲಕ್ಷ್ಮಣ್ ಹನುಮಪ್ಪ ಬಿದರಿ

ಸಮಾಜ ಸೇವೆ: ವೀರಸಂಗಯ್ಯ, ಹೀರಾಚಂದ್‍ ವಾಗ್ಮಾರೆ, ಮಲ್ಲಮ್ಮ ಸೂಲಗಿತ್ತಿ, ದಿಲೀಪ್ ಕುಮಾರ್

ಸಂಕೀರ್ಣ: ಹುಲಿಕಲ್ ನಟರಾಜ, ಡಾ. ಹೆಚ್. ಆರ್.‌ ಸ್ವಾಮಿ, ಆ.ನ ಪ್ರಹ್ಲಾದ ರಾವ್, ಕೆ. ಅಜೀತ್ ಕುಮಾರ್ ರೈ, ಇರ್ಫಾನ್ ರಜಾಕ್ (ವಾಸ್ತುಶಿಲ್ಪ), ವಿರೂಪಾಕ್ಷ ರಾಮಚಂದ್ರಪ್ಪ ಹಾವನೂರ

ಹೊರದೇಶ-ಹೊರನಾಡು: ಕನ್ಹಯ್ಯ ನಾಯ್ಡು, ಡಾ. ತುಂಬೆ ಮೊಹಿಯುದ್ದೀನ್‌, ಚಂದ್ರಶೇಖರ ನಾಯಕ್

Also Read  ಅಶಿಸ್ತು ವರ್ತನೆ ➤ಇಬ್ಬರು ಕಾನ್‌ಸ್ಟೆಬಲ್‌ ಅಮಾನತು

ಪರಿಸರ: ಕೇಶವ್ ಹೆಗಡೆ, ಸೀತಾರಾಮ ತೋಳ್ಪಾಡಿ

ರಂಗಭೂಮಿ: ಸರಸ್ವತಿ ಜುಲೈಕ ಬೇಗಂ, ಓಬಳೇಶ್ ಹೆಚ್. ಬಿ., ಭಾಗ್ಯಶ್ರೀ ರವಿ, ಡಿ.ರಾಮು, ಜನಾರ್ಧನ್ ಹೆಚ್. (ಜನ್ನಿ), ಹನುಮಾನದಾಸ ವ. ಪವಾರ (ಢಗಳ ಚಂದ)

ಸಾಹಿತ್ಯ: ಬಿ. ಟಿ. ಲಲಿತಾ ನಾಯಕ್, ಅಲ್ಲಮಪ್ರಭು ಬೆಟ್ಟದೂರು, ಡಾ.ಎಂ. ವೀರಪ್ಪ ಮೊಯ್ಲಿ, ಹನುಮಂತರಾವ್‌ ದೊಡ್ಡಮನಿ, ಡಾ. ಬಾಳಾಸಾಹೇಬ್ ಲೋಕಾಪುರ, ಬೈರಮಂಗಲರಾಮೇಗೌಡ, ಡಾ. ಪ್ರಶಾಂತ್‌ ಮಾಡ್ತಾ

ಶಿಕ್ಷಣ: ಡಾ. ವಿ. ಕಮಲಮ್ಮ, ಡಾ. ರಾಜೇಂದ್ರ ಶೆಟ್ಟಿ, ಡಾ. ಪದ್ಮಾಶೇಖರ್

ಕ್ರೀಡೆ: ಜೂಡ್ ಫೆಲಿಕ್ಸ್ ಸೆಬಾಸ್ಟೀಯನ್ (ಹಾಕಿ), ಗೌತಮ್ ವರ್ಮ, ಆರ್. ಉಮಾದೇವಿ (ಬಿಲಿಯಡ್ಸ್)

ನ್ಯಾಯಾಂಗ: ಬಾಲನ್

error: Content is protected !!
Scroll to Top