ಸಾಧಕರೊಂದಿಗೆ ಸಂಭ್ರಮದಲ್ಲಿ ರಿಂಗಣಿಸಿದ ಕನ್ನಡ ಹಾಡುಗಳು- ಕಸಾಪ ವತಿಯಿಂದ ‘ನಮ್ಮ ಸಾಧಕರೊಂದಿಗೆ ಸಂಭ್ರಮ’ ಆಪ್ತ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಅ. 31. ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕದ ವತಿಯಿಂದ ‘ನಮ್ಮ ಸಾಧಕರೊಂದಿಗೆ ಸಂಭ್ರಮ’ ಎಂಬ ಆಪ್ತ ಕಾರ್ಯಕ್ರಮ ನಗರದ ಶಾರದಾ ವಿದ್ಯಾಲಯದಲ್ಲಿ ಜರುಗಿತು.

ಘಟಕದ ಸದಸ್ಯ, ಕನ್ನಡ ತುಳು ಸಾಹಿತಿ, ಪೊಳಲಿ ಶೀನಪ್ಪ ಹೆಗ್ಡೆ ಪ್ರಶಸ್ತಿ ಪುರಸ್ಕೃತ ಬೆನೆಟ್ ಜಿ. ಅಮ್ಮನ್ನ ಮತ್ತು ಘಟಕದ ಗೌರವ ಕಾರ್ಯದರ್ಶಿ, ಕಸಾಪ ಕೇಂದ್ರ ಮಾರ್ಗದರ್ಶಿ ಸಮಿತಿಯ ಪದಾಧಿಕಾರಿ, ರಾಷ್ಟ್ರಪತಿ ವಿಶಿಷ್ಟ ಸೇವಾ ಪದಕ ಪುರಸ್ಕೃತ (ಗೃಹ ರಕ್ಷಕದಳ ಸಮಾದೇಷ್ಟರಾಗಿ ಸೇವೆ) ಅಲ್ಲದೇ ಇದೀಗ ಕನ್ನಡ ಸಾಹಿತ್ಯ ಪರಿಷತ್ತಿನ ವಿದೇಶೀ ರಾಯಭಾರಿಯಾಗಿ ನಿಯೋಜಿತರಾಗಿರುವ ಡಾ. ಮುರಲೀಮೋಹನ್ ಚೂಂತಾರು ಅವರನ್ನು ಆತ್ಮೀಯವಾಗಿ ಅಭಿನಂದಿಸಿ ಸನ್ಮಾನಿಸಲಾಯಿತು. ಚೂಂತಾರುರವರ ಕಸಾಪ ಅಧ್ಯಕ್ಷ ನಾಡೋಜ ಮಹೇಶ್ ಜೋಶಿಯವರೊಂದಿಗಿನ ವಿದೇಶ ಪ್ರವಾಸ, ಅಲ್ಲಿನ ಕನ್ನಡ ಸಂಘಗಳಿಗೆ ಭೇಟಿ ಮತ್ತು ರಾಜ್ಯೋತ್ಸವ  ಕಾರ್ಯಕ್ರಮಗಳಿಗೆ ಶುಭ ಕೋರಲಾಯಿತು.

Also Read  ಎಸ್.ಎಸ್.ಎಲ್.ಸಿ. ಮರುಮೌಲ್ಯಮಾಪನ➤ ಮನೋಜ್‍ಗೆ ಹೆಚ್ಚುವರಿ ಅಂಕ

ಈ ಸಂದರ್ಭದಲ್ಲಿ ಇಂಚರ ತಂಡದ ಗಾಯಕಿಯರಾದ ರತ್ನಾವತಿ ಜೆ. ಬೈಕಾಡಿ, ಗೀತಾ ಮಲ್ಯ, ಜಯಲಕ್ಷ್ಮೀ ಬಾಲಕೃಷ್ಣ , ಜಯಶ್ರೀ, ಉಮಾ ಪಾಲಾಕ್ಷಪ್ಪ ಸಮೂಹ ಗಾಯನದಲ್ಲಿ ಮತ್ತು ಪ್ರತೀಕ್ಷಾ ಭಟ್ ಕೋಂಬ್ರಾಜೆ, ಪುಟಾಣಿ ಸಹಸ್ರ ಕೋಂಬ್ರಾಜೆ, ಮುರಳೀಧರ ಭಾರದ್ವಾಜ್, ಉಷಾ ಜಿ. ಪ್ರಸಾದ್ ಕನ್ನಡ ಹಾಡುಗಳ ಪ್ರಸ್ತುತಿ ಸಭಾಸದರ ಮುಕ್ತ ಕಂಠದ ಪ್ರಶಂಸೆಗೆ ಪಾತ್ರವಾಯಿತು. ಡಾ. ಶ್ರೀಕೃಷ್ಣ ಭಟ್ ಸುಣ್ಣಂಗುಳಿ ಅವರ ಕಾವ್ಯ ವಾಚನ ನೆರೆದವರ ಮನಸೂರೆಗೊಂಡಿತು.

error: Content is protected !!
Scroll to Top