ಗೃಹರಕ್ಷಕ ದಳ ಕಛೇರಿಯಲ್ಲಿ ‘ಜಾಗೃತಿ ಅರಿವು ಸಪ್ತಾಹ-2024’

(ನ್ಯೂಸ್ ಕಡಬ) newskadaba.com ಅ.29. ಗೃಹರಕ್ಷಕದಳ ಕೇಂದ್ರ ಕಚೇರಿಯ ಆದೇಶದಂತೆ ಮಂಗಳೂರಿನ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ ಕಚೇರಿಯಲ್ಲಿ ಭ್ರಷ್ಟಾಚಾರದ ವಿರುದ್ಧ ‘ಜಾಗೃತಿ ಅರಿವು ಸಪ್ತಾಹ-2024’ ಇದರ ಅಂಗವಾಗಿ ಪ್ರಾಮಾಣಿಕತೆ ಮತ್ತು ನಿಷ್ಠೆಗೆ ಬದ್ಧರಾಗಿರುವುದಾಗಿ ಹಾಗೂ ಭ್ರಷ್ಟಾಚಾರದ ವಿರುದ್ಧ ಜಾಗೃತಿ ಮೂಡಿಸಲು ಹೋರಾಟವನ್ನು ಬೆಂಬಲಿಸುವುದಾಗಿ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಇವರ ಸಮ್ಮುಖದಲ್ಲಿ “ಜಾಗೃತಿ ಅರಿವು ಸಪ್ತಾಹ-2024”ವನ್ನು ಆಚರಿಸಲಾಯಿತು.

ಭ್ರಷ್ಟಾಚಾರ ನಿರ್ಮೂಲನಾ ಪ್ರತಿಜ್ಞೆಯಲ್ಲಿ ಕಛೇರಿಯ ಅಧೀಕ್ಷಕರಾದ ಶ್ರೀ ಎನ್. ಚಂದ್ರ, ಪ್ರಥಮ ದರ್ಜೆ ಸಹಾಯಕಿ ಶ್ರೀಮತಿ ಶ್ಯಾಮಲಾ ಎ., ಸಿಬ್ಬಂದಿ ದಲಾಯತ್ ಶ್ರೀಮತಿ ಮಂಜುಳಾ ಲಮಾಣಿ ಮತ್ತು ಗೃಹರಕ್ಷಕರಾದ ಸಂಜಯ್, ಸುಲೋಚನ, ನಿಶಾ ಇವರುಗಳು ಪ್ರತಿಜ್ಞೆಯನ್ನು ಮಾಡಿದರು.

Also Read  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಕೊರೊನಾ ಏರಿಕೆ..!

 

error: Content is protected !!
Scroll to Top