ಉಕ್ಕಿನ ಮನುಷ್ಯ ಸರ್ದಾರ್ ಪಟೇಲ್ 150ನೇ ಜನ್ಮದಿನ- ಪ್ರಧಾನಿ ಕರೆಯಂತೆ ಏಕತೆಗಾಗಿ ಇಂದು ಓಟ ಕಾರ್ಯಕ್ರಮ ಆಯೋಜನೆ

(ನ್ಯೂಸ್ ಕಡಬ) newskadaba.com ಅ.29. ಉಕ್ಕಿನ ಮನುಷ್ಯ ಎಂದೇ ಬಿರುದಾಂಕಿತರಾದ ‘ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜನ್ಮದಿನಾಚರಣೆ ಸಂದರ್ಭದಲ್ಲಿ ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಕರೆಯಂತೆ ಇಂದು ಮಂಗಳೂರು ನಗರದಲ್ಲಿ ‘ಏಕತಾ ಓಟ’ ಆಯೋಜಿಸಲಾಗಿದೆ.

ಈ ಹಿನ್ನಲೆಯಲ್ಲಿ ಮಂಗಳವಾರ ಸಂಜೆ 5 ಗಂಟೆಗೆ ನಗರ ಮಂಗಳ ಕ್ರೀಡಾಂಗಣದಿಂದ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಸರ್ಕಲ್ ವರೆಗೆ (ನವಭಾರತ್ ಸರ್ಕಲ್) ನಡೆಯುವ ಈ ಏಕತಾ ಓಟದಲ್ಲಿ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಸೇರಿ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಈ ರಾಷ್ಟ್ರೀಯ ಐಕ್ಯತಾ ದಿನದ ಪ್ರಯುಕ್ತ ನಡೆಯುವ ‘ರನ್ ಫಾರ್ ಯೂನಿಟಿ’ಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಳ್ಳಬಹುದಾಗಿದೆ.

Also Read  ಗಂಡನ ಕೊಲೆ ಮಾಡಿ ಮನೆಯಲ್ಲೇ ಸಮಾಧಿ ಮಾಡಿದ ಪತ್ನಿ

ಈ ಬಾರಿ ಪ್ರಸಾರವಾದ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಅವರು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಬೇಕು. ದೇಶದ ಏಕತೆಯ ಮಂತ್ರದ ಜೊತೆಗೆ ಗರಿಷ್ಟ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಫಿಟ್‌ ನೆಸ್ ಮಂತ್ರವನ್ನು ಎಲ್ಲೆಡೆ ಹರಡುವಂತೆ ಕರೆ ನೀಡಿದ್ದರು.

error: Content is protected !!
Scroll to Top