ದೇವರಿಗೆ ಇಟ್ಟ ದೀಪದಿಂದಾಗಿ ಪೈಂಟ್‌ ಅಂಗಡಿ ಬೆಂಕಿಗಾಹುತಿ ► ಲಕ್ಷಾಂತರ ರೂ. ನಷ್ಟ

(ನ್ಯೂಸ್ ಕಡಬ) newskadaba.com .ಉಡುಪಿ, ಮಾ.20. ದೇವರಿಗೆ ಇಟ್ಟ ದೀಪ ಮಗುಚಿ ಬಿದ್ದ ಪರಿಣಾಮ ಪೈಂಟ್‌ ಅಂಗಡಿಯೊಂದು ಬೆಂಕಿಗೆ ಆಹುತಿಯಾದ ಘಟನೆ ಉಡುಪಿಯಲ್ಲಿ ಮಂಗಳವಾರದಂದು ನಡೆದಿದೆ.

ಉಡುಪಿಯ ಈಶ್ವರನಗರದ ನಾಲ್ಕು ಮಹಡಿಯ ಕಟ್ಟಡವೊಂದರಲ್ಲಿ ಈ ಅಗ್ನಿ ಅವಘಡ ಸಂಭವಿದ್ದರಂದಾಗಿ ಲಕ್ಷಾಂತರ ರುಪಾಯಿಯ ನಷ್ಟ ಸಂಭವಿದೆ . ಪೈಂಟ್‌ ಅಂಗಡಿಯಲ್ಲಿ ದೇವರಿಗೆ ಇಟ್ಟ ದೀಪ ಬಿದ್ದು ಈ ಅವಘಡ ಸಂಭವಿಸಿದ್ದು, ಘಟನೆಯಲ್ಲಿ ಅಪಾರ ಪ್ರಮಾಣದ ಪೈಂಟ್‌ ಡಬ್ಬಗಳು ಸುಟ್ಟು ಹೋಗಿವೆ. ಕಟ್ಟಡ ಪೂರ್ತಿ ದಟ್ಟ ಹೊಗೆ ಆವರಿಸಿದ್ದರಿಂದಾಗಿ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಬೆಂಕಿಯನ್ನು ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಘಟನೆಯಲ್ಲಿ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.

Also Read  ಪುತ್ತೂರು: ವಿಶ್ವ ಜನಸಂಖ್ಯಾ ದಿನಾಚರಣೆ-2020

error: Content is protected !!
Scroll to Top