(ನ್ಯೂಸ್ ಕಡಬ) newskadaba.com ಅ.26. ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯಿಂದ ತಣ್ಣೀರುಬಾವಿ ಬ್ಲೂ ಫ್ಲ್ಯಾಗ್ ಕಡಲ ತೀರವನ್ನು ಅಭಿವೃದ್ಧಿ ಹಾಗೂ ನಿರ್ವಹಣೆಗಾಗಿ ಲೀಸ್ ಆಧಾರದ ಮೇಲೆ ಗುತ್ತಿಗೆ ನೀಡಲು ಇ-ಟೆಂಡರ್ ಸಲ್ಲಿಸಲು ಕಡೆಯ ದಿನಾಂಕವನ್ನು ನವೆಂಬರ್ 8ರ ವರೆಗೆ ವಿಸ್ತರಿಸಲಾಗಿದೆ. ಈ ಪ್ರಯುಕ್ತ ಅಕ್ಟೋಬರ್ 28ರಂದು ರಂದು ಬೆಳಿಗ್ಗೆ 11.30 ಗಂಟೆಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರ ಕಛೇರಿ ಸಭಾಂಗಣದಲ್ಲಿ ಪ್ರೀ ಬಿಡ್ ಸಭೆ ಕರೆಯಲಾಗಿದೆ. ಆಸಕ್ತ ಬಿಡ್ಡುದಾರರು ಭಾಗವಹಿಸುವಂತೆ ಪ್ರವಾಸೋದ್ಯಮ ಇಲಾಖೆ ಪ್ರಕಟಣೆ ತಿಳಿಸಿದೆ.