ರಾಜ್ಯ ಮಟ್ಟದ ಗಾಂಧೀಜಿ ಪ್ರಬಂಧ ಸ್ಪರ್ಧೆ

(ನ್ಯೂಸ್ ಕಡಬ) newskadaba.com ಅ.26. ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ವತಿಯಿಂದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 155ನೇ ಜಯಂತಿಯ ಅಂಗವಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಚಾಲಿತ ವಿಶ್ವದಲ್ಲಿ ಗಾಂಧಿ ತತ್ವ ಸಿದ್ಧಾಂತಗಳ ಮಹತ್ವದ ಬಗ್ಗೆ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಜಿಲ್ಲಾ ಮತ್ತು ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ಜಿಲ್ಲಾ ಮಟ್ಟದ ಸ್ಪರ್ಧೆಗೆ ಪ್ರಬಂಧಗಳನ್ನು ಬರೆದು ಅಕ್ಟೋಬರ್ 31ರೊಳಗಾಗಿ ಇ-ಮೇಲ್ ವಿಳಾಸ kstaessay.kannada@gmail.com ಅಥವಾ kstaessay.english@gmail.com ಗೆ ಕಳುಹಿಸಿಕೊಡಬೇಕು. ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ನವೆಂಬರ್ 12ರಂದು ಅಕಾಡೆಮಿಯಲ್ಲಿ ಆಯೋಜಿಸಲಾಗುವ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಸ್ಥಳದಲ್ಲೇ ಪ್ರಬಂಧವನ್ನು ಬರೆಯಬೇಕಾಗಿರುತ್ತದೆ. (ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಪ್ರತ್ಯೇಕವಾಗಿ)

Also Read  ಕಡಬ: ಯುವಜನ ಒಕ್ಕೂಟ ನಿರ್ದೇಶಕರಾಗಿ ದೇವಿಪ್ರಸಾದ್ ರೈ ಗೆಜ್ಜೆ ಆಯ್ಕೆ

ಹೆಚ್ಚಿನ ಮಾಹಿತಿಗೆ ಚಂದ್ರಶೇಖರ ಮೂರ್ತಿ.ಎಸ್ (ಮೊಬೈಲ್ ಸಂಖ್ಯೆ 9686449019, 9686919019. ದೂರವಾಣಿ ಸಂಖ್ಯೆ 9824-29721550) ಅಥವಾ ಅಕಾಡೆಮಿಯ ವೆಬ್‍ಸೈಟ್ www.kstacademy.in ಸಂಪರ್ಕಿಸುವಂತೆ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಟಣೆ ತಿಳಿಸಿದೆ.

error: Content is protected !!
Scroll to Top