ಕಸ್ತೂರಿ ರಂಗನ್ ವರದಿ ವಿರುದ್ದ ಕುಟ್ರುಪಾಡಿಯಲ್ಲಿ ಪ್ರತಿಭಟನೆ – ಅರಣ್ಯ ಭೂಮಿಯ ಜಂಟಿ ಸರ್ವೆಗೆ ಆಗ್ರಹ

(ನ್ಯೂಸ್ ಕಡಬ) newskadaba.com ಅ.26. ಅರಣ್ಯ ಭೂಮಿಯ ಜಂಟಿ ಸರ್ವೆ ಮಾಡುವುದು, ಪಶ್ಚಿಮಘಟ್ಟ ಪ್ರದೇಶಕ್ಕೆ ಗಡಿ ಗುರುತು ಮಾಡುವುದು ಮತ್ತು ಅರಣ್ಯ ಭೂಮಿಗಳಿಗೆ ಬಫರ್ ನ್ ಇಡಬಾರದು. ಇಷ್ಟು ಅಂಶಗಳನ್ನು ಸರಕಾರ ಮಾಡಿದರೆ ಯಾವ ಅರಣ್ಯ ರಕ್ಷಣೆಯ ವರದಿಗೂ ರೈತರು ಭಯ ಪಡಬೇಕಿಲ್ಲ ಎಂದು ಮಲೆನಾಡು ಜನಹಿತ ರಕ್ಷಣೆ ವೇದಿಕೆಯ ಸಂಚಾಲಕ ಕಿಶೋ‌ರ್ ಶಿರಾಡಿ ಹೇಳಿದರು. ಕಸ್ತೂರಿ ರಂಗನ್ ವರದಿಯ ವಿರುದ್ಧ ಕುಟ್ರುಪ್ಪಾಡಿ ಗ್ರಾ.ಪಂ. ಕಚೇರಿ ಎದುರು ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.

ಕಸ್ತೂರಿ ರಂಗನ್ ವರದಿಗೆ ನಮ್ಮ ವಿರೋಧವಿದೆಯೇ ಹೊರತು ಪರಿಸರ ರಕ್ಷಣೆಗೆ ಅಲ್ಲ, ಆದರೆ ಪರಿಸರ ಸಂರಕ್ಷಣೆಯ ನೆಪದಲ್ಲಿ ಜನರಿಗೆ ತೊಂದರೆಯನ್ನುಂಟು ಮಾಡುವುದನ್ನು ಸಹಿಸುವುದಿಲ್ಲ ಎಂದರು.

ಪರಿಸರವಾಸಿಗಳು ಎಷ್ಟೋ ವರ್ಷಗಳಿಂದ ಕೃಷಿ ಮಾಡಿಕೊಂಡು ವಾಸಿಸುತ್ತಿರುವ ಜಮೀನನ್ನು ಅರಣ್ಯ ಇಲಾಖೆ ಅರಣ್ಯ ಎಂದು ಹೇಳುವುದು, ಕೆಲವು ಕಡೆ ಕಂದಾಯ ಇಲಾಖೆ ಹಣ ಪಡೆದುಕೊಂಡು ಹಕ್ಕು ಪತ್ರ ನೀಡಿರುವುದು ಇದೆಲ್ಲ ಮಾಡಿ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಲಾಗಿದೆ ಎಂದ ಅವರು 20-30 ವರ್ಷಗಳ ಹಿಂದೆ ಕಂದಾಯ ಇಲಾಖೆಯ ಕೈಬರಹದ ಪಹಣಿಯಲ್ಲಿ ಕಂದಾಯ ಭೂಮಿ ಅಂತ ಇದ್ದರೆ ಈಗ ಆರಣ್ಯ ಭೂಮಿ, ಭಾಗಶಃ ಅರಣ್ಯ ಎಂಬುದೆಲ್ಲ ಇರುತ್ತದೆ. ಇದೆಲ್ಲ ಯಾರ ಗಮನಕ್ಕೆ ತಂದು ಮಾಡಲಾಗಿದೆ. ಕಸ್ತೂರಿ ರಂಗನ್ ವರದಿಯ ಅನುಷ್ಠಾನಕ್ಕೆ ಸುಪ್ರೀಂ ಕೋರ್ಟ್ ಆದೇಶವಲ್ಲ, ಇದು ಹಸಿರು ಪೀಠದ ಆದೇಶವಾಗಿದೆ. ಇದು ಅನುಷ್ಠಾನ ಆಗಿಯೇ ಆಗುತ್ತದೆ ಎಂಬುದಾಗಿ ಜನರನ್ನು ನಂಬಿಸಲಾಗುತ್ತಿದೆ. ಆದರೇ ಜನರು ಸರಿಯಾಗಿ ಹೋರಾಟ ಮಾಡಿದರೆ ಈ ವರದಿಯ ಜಾರಿ ಸಾಧ್ಯವಿಲ್ಲ ಎಂದು ಕಿಶೋರ್ ಹೇಳಿದರು.

Also Read  ಆದ್ಯಪಾಡಿ ಮಹಿಳಾ ಸಿಬ್ಬಂದಿಗೆ ಲೈಂಗಿಕ‌ ಕಿರುಕುಳ ಪ್ರಕರಣಕ್ಕೆ ಹೊಸ ತಿರುವು ► ಬೈಕಿಗೆ ಢಿಕ್ಕಿ ಹೊಡೆದಿರುವುದನ್ನು ವಿಚಾರಿಸಿದ್ದಕ್ಕೆ ಕಾರಿನಲ್ಲಿದ್ದವರು ಹಲ್ಲೆ ನಡೆಸಿದ್ದಾರೆಂದು ಮರು ದೂರು

ಜಿ.ಪಂ. ಮಾಜಿ ಸದಸ್ಯ ಕೃಷ್ಣ ಶೆಟ್ಟಿ ಮಾತನಾಡಿ, ”ಕಸ್ತೂರಿ ರಂಗನ್ ವರದಿಯ ನೆಪದಲ್ಲಿ ಈ ಭಾಗದ ಜನರ ಬದುಕಿನ ಜತೆ ಚೆಲ್ಲಾಟ ಆಡಲಾಗುತ್ತಿದೆ. ಪ್ರಪಂಚದ ಬೇರೆ ಭಾಗಕ್ಕೆ ಅನುಕೂಲ ಆಗುವ ವಿಚಾರಕ್ಕೆ ನಮ್ಮ ಭಾಗದವರಿಗೆ ತೊಂದರೆ ಕೊಡಲಾಗುತ್ತದೆ. ಎತ್ತಿನ ಹೊಳೆ ಯೋಜನೆಗೆ ಯಾವ ಕಾನೂನು ಇಲ್ಲ, ಸಾವಿರಾರು ಕೋಟಿ ಹಾಳು ಮಾಡಿ ಪರಿಸರ ನಾಶ ಮಾಡಿದರೂ ಯಾರು ಕೇಳುವವರಿಲ್ಲ, ಆದರೆ ರೈತರು ಇಂದು ರಸ್ತೆ ಮಾಡಿದರೂ ಅದಕ್ಕೆ ನೂರಾರು ಕಾನೂನು ಇದೆ. ಕಸ್ತೂರಿ ರಂಗನ್ ವರದಿಯ ವಿರುದ್ದ ಎಲ್ಲರೂ ರಾಜಕೀಯ ರಹಿತವಾಗಿ ಹೋರಾಡಬೇಕಿದೆ ಎಂದರು.

Also Read  ನೇತ್ರಾವತಿ ನದಿಗೆ ಮಲಿನ ತ್ಯಾಜ್ಯ ಎಸೆದ ಪ್ರಕರಣ ➤‌ ಬಾರ್ & ರೆಸ್ಟೋರೆಂಟ್ ಗೆ ದಂಡ ವಿಧಿಸಿದ ಗ್ರಾ.ಪಂ.

ಜಿಲ್ಲಾ ಪರಿಷತ್ ಮಾಜಿ ಸದಸ್ಯ ಸೈಯದ್ మిరా ಸಾಹೇಬ್ ಮಾತನಾಡಿದರು. ಕುಟ್ರುಪ್ಪಾಡಿ ಗ್ರಾ.ಪಂ. ಮಾಜಿ ಸದಸ್ಯ ಮ್ಯಾಥ್ಯು ಟಿ.ಎಂ. ಹೋರಾಟಕ್ಕೆ ಬೆಂಬಲ ಸೂಚಿಸಿದರು. ವೇದಿಕೆಯಲ್ಲಿ ಕುಟ್ಟುಪಾಡಿ ಗ್ರಾ.ಪಂ. ಅಧ್ಯಕ್ಷೆ ಸುಮನ, ಬಲ್ಯ ಗ್ರಾಮ ಸಮಿತಿಯ ಅಧ್ಯಕ್ಷ ಯೋಗೀಂದ್ರ ಉಪಸ್ಥಿತರಿದ್ದರು. ತಾಲೂಕು ಸಮಿತಿಯ ಸದಸ್ಯರಾದ ಧನಂಜಯ ಕೊಡಂಗೆ ಪ್ರಸ್ತಾವನೆ ಮಾಡಿದರು. ಮಹಮ್ಮದ್ ಅಲಿ ಸ್ವಾಗತಿಸಿದರು. ಅಚ್ಯುತ ದೇರಾಜೆ ವಂದಿಸಿದರು. ಜಯಚಂದ್ರ ರೈ ಕುಂಟೋಡಿ, ಮಾಜಿ ಜಿ.ಪಂ. ಸದಸ್ಯ ಪಿ.ಪಿ. ವರ್ಗೀಸ್ ಮತ್ತಿತರ ಪ್ರಮುಖರು ಭಾಗವಹಿಸಿದ್ದರು.

error: Content is protected !!
Scroll to Top