(ನ್ಯೂಸ್ ಕಡಬ) newskadaba.com ಅ. 25. ಗುರುವಾರದಿಂದ ಹಾಸನಾಂಬೆ ದರ್ಶನ ಆರಂಭವಾಗಿದ್ದು, ನವೆಂಬರ್ 3ರವರೆಗೆ ಹಾಸನಾಂಬೆ ದೇವಿಯ ದರ್ಶನ ಪಡೆಯಬಹುದಾಗಿದೆ. ಆದಿಚುಂಚನಗಿರಿ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಸಮ್ಮುಖದಲ್ಲಿ ಬಾಗಿಲು ತೆರೆಯಲಾಗಿದೆ.
ದಿನದ 24 ಗಂಟೆಯೂ ದೇವಿ ದರ್ಶನ ಮಾಡಬಹುದಾಗಿದೆ. ಭಾರೀ ಭಕ್ತರು ಬರುವ ಕಾರಣ ಬಂದೋಬಸ್ತ್ ಮಾಡಲಾಗಿದೆ. ದೇವಿಯ ದರ್ಶನಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಹಾಗೂ ವ್ಯವಸ್ಥೆ ಮಾಡಿದೆ. ಹಾಸನಾಂಬೆ ದರ್ಶನಕ್ಕೆ ಭಕ್ತಸಾಗರ ಹರಿದು ಬರುತ್ತಿದೆ. ಭಕ್ತರ ಗಮನ ಸೆಳೆಯಲು ಶಿವಲಿಂಗ, ನಂದಿ, ನವಿಲು, ಆನೆಗಳ ಕಲಾಕೃತಿ ಕೂಡಾ ನಿರ್ಮಾಣ ಮಾಡಲಾಗಿದೆ. ಬರುವ ಭಕ್ತರಿಗೆ ಪುಷ್ಪಾಲಂಕಾರ ಮನಸೋಲ್ಲಾಸಗೊಳಿಸುವಂತೆ ವಿಜೃಂಭಣೆಯಿಂದ, ನಿಯಮಬದ್ಧವಾಗಿ ಹಾಸನಾಂಬೆ ದರ್ಶನೋತ್ಸವನ್ನ ಹಾಸನ ಜಿಲ್ಲಾಡಳಿತ ಆಚರಿಸುತ್ತಲಿದೆ.