ವಿದ್ಯಾಭಾರತಿ ರಾಷ್ಟ್ರಮಟ್ಟದ ಈಜು ಸ್ಪರ್ಧೆ- ಶಕ್ತಿ ವಿದ್ಯಾಸಂಸ್ಥೆಗೆ ಪದಕ

(ನ್ಯೂಸ್ ಕಡಬ) newskadaba.com ಅ. 25. ವಿದ್ಯಾಭಾರತಿ ರಾಷ್ಟ್ರಮಟ್ಟದ ಈಜು ಸ್ಪರ್ಧೆಯು ಅಕ್ಟೋಬರ್ 1 ರಿಂದ 4ರವರೆಗೆ ಮಧ್ಯಪ್ರದೇಶದ ಮದಸ್ಸೂರ್ ನಲ್ಲಿ ನಡೆಯಿತು.  ಈ ಸ್ಪರ್ಧೆಯಲ್ಲಿ ಶಕ್ತಿ ಪದವಿಪೂರ್ವ ಕಾಲೇಜಿನ ಸ್ಪೀವ್ ಜೆಫ್ ಲೋಬೊ ದ್ವಿತೀಯ ವಿಜ್ಞಾನ ವಿಭಾಗ 4 ಚಿನ್ನದ ಪದಕಗಳು ಹಾಗೂ ಶಕ್ತಿ ವಸತಿ ಶಾಲೆಯ ಕೀರ್ತನ್ ಬೇಕಲ್ 2 ಬೆಳ್ಳಿ ಪದಕಗಳನ್ನು ಪಡೆದು 68ನೇ SಉಈI ರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆಯಲ್ಲಿ ವಿದ್ಯಾಭಾರತಿ ತಂಡವನ್ನು ಪ್ರತಿನಿಧಿಸಲು ಅಯ್ಕೆಯಾಗಿರುತ್ತಾರೆ ಹಾಗೂ ಶ್ರೀ ವಿಷ್ಣು  ಪ್ರಥಮ ಪಿ.ಯು.ಸಿ. (ವಾಣಿಜ್ಯ ವಿಭಾಗ) ಕಂಚಿನ ಪದಕವನ್ನು ಪಡೆದಿರುತ್ತಾರೆ. ಇವರಿಗೆ ಶಕ್ತಿ ವಿದ್ಯಾ ಸಂಸ್ಥೆಯ ಈಜು ತರಬೇತುದಾರರಾದ ಶ್ರೀ ನಾಗರಾಜ್ ಖಾರ್ವಿ ತರಬೇತಿ ನೀಡಿರುತ್ತಾರೆ. ಈ ಸಂದರ್ಭದಲ್ಲಿ ವಿಜೇತರನ್ನು ಸಂಸ್ಥೆಯ ಸಂಸ್ಥಾಪಕರಾದ ಡಾ. ಕೆ. ಸಿ. ನಾೈಕ್, ಕಾರ್ಯದರ್ಶಿ ಸಂಜಿತ್ ನಾೈಕ್. ಪ್ರಧಾನ ಸಲಹೆಗಾರರಾದ ರಮೇಶ್ ಕೆ., ಶಕ್ತಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವೆಂಕಟೇಶ ಮೂರ್ತಿ ಮತ್ತು ಶಕ್ತಿ ವಸತಿಶಾಲೆಯ ಪ್ರಾಂಶುಪಾಲೆಯಾದ ಬಬಿತಾ ಸೂರಜ್ಅಭಿನಂದಿಸಿದ್ದಾರೆ.

error: Content is protected !!
Scroll to Top