ಎಸ್.ಸಿ.ಎಸ್. ಆಸ್ಪತ್ರೆಯ 37ನೇ ವಾರ್ಷಿಕೋತ್ಸವ ಸಂಭ್ರಮಾಚರಣೆ

(ನ್ಯೂಸ್ ಕಡಬ) newskadaba.com ಅ. 25. 37ನೇ ವಾರ್ಷಿಕೋತ್ಸವದ ಸಂಭ್ರಮಾಚರಣೆಯ ಅಂಗವಾಗಿ ದಿ. ಸೊರಕೆ ಚಂದ್ರಶೇಖರ್ – ಸ್ಥಾಪಕಾಧ್ಯಕ್ಷರು ಎಸ್.ಸಿ.ಎಸ್. ಆಸ್ಪತ್ರೆ ಇವರ ಸ್ಮರಣಾರ್ಥವಾಗಿ ನೂರಾರು ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಸೊರಕೆ ಚಂದ್ರಶೇಖರ್ ಸ್ಮಾರಕ ವಾರ್ಷಿಕ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು.

ಶ್ರೀ. ಐವನ್ ಡಿಸೋಜ- ಸದಸ್ಯರು, ವಿಧಾನಸಭಾ ಪರಿಷತ್, ಕರ್ನಾಟಕ ಸರ್ಕಾರ, ಡಾ. ಜೆ. ಪಿ. ಆಳ್ವ- ಹಿರಿಯ ವೈದ್ಯರು, ನಿವೃತ್ತ ಡೀನ್ ಹಾಗೂ ಪ್ರಾಧ್ಯಾಪಕರು, ಮೆಡಿಸಿನ್ ವಿಭಾಗ, ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು, ಶ್ರೀ. ರಂಜನ್ ಬೆಳ್ಳರ್ಪಾಡಿ- ಮಂಗಳಾ ರಿಸೋರ್ಸಸ್ ಮ್ಯಾನೇಜ್ಮೆಂಟ್‍ನ ಸ್ಥಾಪಕರು, ರಾಮಕೃಷ್ಣ ಮಿಷನ್ ಹಾಗೂ ಸ್ವಚ್ಛ ಮಂಗಳೂರು ಅಭಿಯಾನದ ಮುಖ್ಯ ಸಂಯೋಜಕರುಗಳು ವಿದ್ಯಾರ್ಥಿ ವೇತನ ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಡಾ. ಜೀವರಾಜ್ ಸೊರಕೆ, ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರು, ಎಸ್.ಸಿ.ಎಸ್. ಆಸ್ಪತ್ರೆ, ಮಂಗಳೂರು ಇವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ, ವಿದ್ಯಾರ್ಥಿ ವೇತನವನ್ನು ಸ್ವೀಕರಿಸಿದ ವಿದ್ಯಾರ್ಥಿಗಳು ಮುಂದೆ ಸಮಾಜದಲ್ಲಿ ಸಮರ್ಥರಾಗಿ ಬೆಳೆದು ಸಕಾರಾತ್ಮಕ ಮನೋಭಾವನೆಯೊಂದಿಗೆ ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಿ ತಾವೂ ಸಹ ಡಾ. ಜೀವರಾಜ್ ಸೊರಕೆ, ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶರು, ಎಸ್.ಸಿ.ಎಸ್. ಆಸ್ಪತ್ರೆ, ಇವರಂತೆ ಆರ್ಥಿಕವಾಗಿ ಹಿಂದುಳಿದ ಇನ್ನಷ್ಟೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಹಾಯಹಸ್ತವನ್ನು ನೀಡುವುದರೊಂದಿಗೆ ಸಮಾಜಸೇವೆ ಮಾಡಿ ಈ ಸಮಾಜಕ್ಕೆ ಮಾದರಿಯಾಗಬೇಕು ಎಂಬ ಕಿವಿಮಾತನ್ನು ಹೇಳಿದರು.

ಡಾ. ವಿನಯ ಹೆಗ್ಡೆ- ವ್ಯವಸ್ಥಾಪಕ ನಿರ್ದೇಶಕರು, ಲೆಮಿನ ಸಮೂಹ ಸಂಸ್ಥೆಗಳು, ಅಧ್ಯಕ್ಷರು ನಿಟ್ಟೆ ವಿದ್ಯಾ ಸಮೂಹ ಸಂಸ್ಥೆ, ಕುಲಪತಿಗಳು, ನಿಟ್ಟೆ ವಿಶ್ವವಿದ್ಯಾನಿಲಯ, ಇವರು ಅತ್ಯಾಧುನಿಕ ಯಂತ್ರೋಪಕರಣಗಳ ಮೂಲಕ ಸುಸಜ್ಜಿತಗೊಂಡ ಮಕ್ಕಳ ತೀವ್ರ ನಿಗಾ ಘಟಕವನ್ನು ಉದ್ಘಾಟಿಸಿ, ಎಸ್.ಸಿ.ಎಸ್ ಆಸ್ಪತ್ರೆಯ ಮಕ್ಕಳ ತೀವ್ರ ನಿಗಾ ಘಟಕವು ಅತ್ಯಾಧುನಿಕ ಯಂತ್ರೋಪಕರಣಗಳ ಮೂಲಕ ಸುಸಜ್ಜಿತವಾಗಿ ನಿರ್ಮಿಸಿದ್ದು, ಎಲ್ಲಾ ತರಹದ ಚಿಕಿತ್ಸೆಗಳನ್ನು ನೀಡಲು ಸಮರ್ಥವಾಗಿದ್ದು ಮಾತ್ರವಲ್ಲದೆ ನುರಿತ ಅನುಭವೀ ದಾದಿಯರು ಹಾಗೂ ವೈದ್ಯಕೀಯ ತಂಡಗಳನ್ನು ಒಳಗೊಂಡಿದೆ ಎಂಬುದನ್ನು ತಿಳಿಸಿ ಸಂತಸ ವ್ಯಕ್ತಪಡಿಸಿದರು. ಡಾ. ವಿನಯ ಹೆಗ್ಡೆಯವರು ಕಳೆದ ಹಲವಾರು ದಶಕಗಳಿಂದ ಎಸ್.ಸಿ.ಎಸ್. ಆಸ್ಪತ್ರೆಯಲ್ಲಿ ನೀಡಲ್ಪಡುವ ಉತ್ಕೃಷ್ಟ ಗುಣಮಟ್ಟದ ನವಜಾತ ಶಿಶುಗಳ ಸೇವೆಯನ್ನು ಶ್ಲಾಘಿಸುತ್ತಾ ಹಿಂದೊಮ್ಮೆ ತಮ್ಮ ಆತ್ಮೀಯ ಸಂಬಂಧಿಯೋರ್ವರಿಗೆ ಅಕಾಲಿಕವಾಗಿ ಜನಿಸಿದ ಏಳು ತಿಂಗಳ ನವಜಾತ ಶಿಶುವನ್ನು ಯಶಸ್ವಿಯಾಗಿ ಪರಿಶೀಲಿಸಿ ಎಸ್.ಸಿ.ಎಸ್. ಆಸ್ಪತ್ರೆಯ ಮಕ್ಕಳ ತೀವ್ರ ನಿಗಾ ಘಟಕದ ವೈದ್ಯಕೀಯ ತಂಡದ ಉತ್ತಮ ಗುಣಮಟ್ಟದ ಆರೈಕೆಯ ಸತ್ಫಲವಾಗಿ ಇಂದು ಆರೋಗ್ಯಪೂರ್ಣ ವ್ಯಕ್ತಿಯಾಗಿ ಜೀವನ ಸಾಗಿಸುತ್ತಿದ್ದಾನೆ ಎಂಬುದನ್ನು ನೆನಪಿಸಿದರು.

Also Read  ಬ್ರಹ್ಮಾವರ : ಶಿಕ್ಷಕರಿಂದ ವಿದ್ಯಾರ್ಥಿಗಳ ಮನೆ ಭೇಟಿ, ಮಕ್ಕಳ ಅಭ್ಯಾಸದ ಕುರಿತು ಪರಿಶೀಲನೆ

ಡಾ. ವಿನಯ ಹಗ್ಡೆಯವರು ಎಸ್.ಸಿ.ಎಸ್. ಆಸ್ಪತ್ರೆಯ ಸ್ಪಾಪಕಾಧ್ಯಕ್ಷರಾದಂತಹ ಸೊರಕೆ ಚಂದ್ರಶೇಖರ್‍ರವರನ್ನು ಬಹಳ ಹತ್ತಿರದಿಂದ ಬಲ್ಲವರಾಗಿದ್ದು, ಸೊರಕೆ ಚಂದ್ರಶೇಖರ್ ರವರು ಅಸಾಧಾರಣ ವೃತ್ತಿಪರತೆ, ನಿಸ್ವಾರ್ಥ ಮನೋಭಾವದ ಸಮಾಜ ಸೇವೆಯನ್ನು ಎಸ್.ಸಿ.ಎಸ್. ಮೊಟಾರ್ಸ್ ಕಂಪನಿಯ ಮೂಲಕ ನೀಡುತ್ತಿದ್ದುದ್ದನ್ನು ನೆನಪಿಸಿದರು. ಡಾ. ಸಂತೋಷ್ ಸೋನ್ಸ್- ಪ್ರಾಧ್ಯಾಪಕರು ಹಾಗೂ ವಿಭಾಗ ಮುಖ್ಯಸ್ಥರು, ಮಕ್ಕಳ ವೈದ್ಯಕೀಯ ಉಪಚಾರ ಶಾಸ್ತ್ರ (ಪೀಡಿಯಾಟ್ರಿಕ್), ಎ.ಜೆ. ವೈದ್ಯಕೀಯ ಮಹಾವಿದ್ಯಾಲಯ ಹಾಗೂ ನವಜಾತ ಶಿಶು ಮತ್ತು ಮಕ್ಕಳ ತೀವ್ರ ನಿಗಾ ಘಟಕ, ಎ.ಜೆ. ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ, ಮಂಗಳೂರು ಇದರ ಮುಖ್ಯಸ್ಥರು, ಎಸ್.ಸಿ.ಎಸ್. ಆಸ್ಪತ್ರೆಯು ಸುಸಜ್ಜಿತವಾಗಿ ನಿರ್ಮಿಸಿದ ಮಕ್ಕಳ ತೀವ್ರ ನಿಗಾ ಘಟಕದ ಮೂಲಕ ಸಮಾಜಕ್ಕೆ ನೀಡುವ ಕೊಡುಗೆ ಹಾಗೂ ಸಾಧನೆಯನ್ನು ಶ್ಲಾಘಿಸಿದರು.

Also Read  ದಾಸವಾಳ ಒಂದು ಔಷಧಿ ಗಿಡ

ಡಾ. ಮುರಳಿ ಕೇಶವ- ಹಿರಿಯ ವೈದ್ಯರು, ಮಕ್ಕಳ ತಜ್ಞರು ಹಾಗೂ ವೈದ್ಯಕೀಯ ನಿರ್ದೇಶಕರು ಸ್ಪರ್ಶ ಡೈಯಾಗ್ನಾಸ್ಟಿಕ್, ಮಂಗಳೂರು, ಇವರು ಎಸ್.ಸಿ.ಎಸ್. ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ದಾದಿಯರು ನೀಡುವ ಅತಿ ಉತ್ಕೃಷ್ಟ ಸೇವಾ ಕೊಡುಗೆಯಿಂದ ಹಲವಾರು ಪೋಷಕರು ಹಾಗೂ ಮಕ್ಕಳು ಅತೀ ಶೀರ್ಘರವಾಗಿ ಗುಣಮುಖರಾಗಿರುವ ತಮ್ಮ ವೈದ್ಯಕೀಯ ಅನುಭವವನ್ನು ಹಂಚಿಕೊಂಡರು. ಇಲ್ಲಿ ದಾಖಲಾಗುವ ಮಕ್ಕಳು ಹಾಗೂ ಹೆತ್ತವರು ಆರೋಗ್ಯಪೂರ್ಣವಾಗಿ, ಆನಂದಮಯವಾಗಿ ನಿಶ್ಚಿಂತೆಯ ನಿಟ್ಟುಸಿರನ್ನು ಬಿಡುತ್ತಾರೆ ಎಂಬ ಅನುಭವದ ನುಡಿಗಳನ್ನು ತಿಳಿಸಿದರು. ಎಸ್.ಸಿ.ಎಸ್. ಆಸ್ಪತ್ರೆಯು ಸಮಾಜಕ್ಕೆ ನೀಡುವ ಶ್ರೇಷ್ಠಮಟ್ಟದ ಸಮಾಜ ಸುಧಾರಣಾ ಯೋಜನೆಗಳು, ವರ್ಷಂಪ್ರತಿ ಆರ್ಥಿಕವಾಗಿ ಅಶಕ್ತರಾದ ನೂರಾರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಚಾರ ಬಯಸದೆ ನೀಡಲ್ಪಡುವ ವಿದ್ಯಾರ್ಥಿವೇತನ, ನಗರ ಮರು ಅರಣ್ಯೀಕರಣ ಯೋಜನೆಗಳ ಬಗ್ಗೆ ಸಂತಸ

ವ್ಯಕ್ತಪಡಿಸಿದರು.

ಎಸ್.ಸಿ.ಎಸ್. ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದಂತಹ ಡಾ. ಚಂದ್ರಶೇಖರ್ ಸೊರಕೆಯವರು ಹಾಗೂ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಮುಖ್ಯ ಅತಿಥಿಗಳನ್ನು ಸ್ವಾಗತಿಸಿದರು. ವಿವಿಧ ಆಟೋಟ ಸ್ಪರ್ಧೆ, ಹೃದಯದ ಆರೋಗ್ಯಕ್ಕೆ ಸಂಬಂಧಪಟ್ಟಂತೆ ಏರ್ಪಡಿಸಿದ ಅಡುಗೆ ಸ್ಪರ್ಧೆ, ಸಂಗೀತ ಸ್ಪರ್ಧಾ ವಿಜೇತರು ಮುಖ್ಯ ಅತಿಥಿಗಳಿಂದ ಬಹುಮಾನವನ್ನು ಸ್ವೀಕರಿಸಿದರು. ಮುಖ್ಯ ಅತಿಥಿಗಳು ಆಸ್ಪತ್ರೆಯ ಸಿಬ್ಬಂದಿಗಳ ಪ್ರತಿಭೆ ಹಾಗೂ ಸಮರ್ಪಣಾಭಾವವನ್ನು ಗುರುತಿಸಿ ಪ್ರಶಂಸಿಸಿದರು. ಆಸ್ಪತ್ರೆಯ ಸಿಬ್ಬಂದಿ ವರ್ಗದವರ ನೃತ್ಯ, ಸಂಗೀತ, ಯಕ್ಷಗಾನ ಮುಂತಾದ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಯನ್ನು ನೀಡಲಾಯಿತು.

error: Content is protected !!
Scroll to Top