ಕಡಬ: ದಲಿತರನ್ನು ಬೌದ್ಧ ಧರ್ಮಕ್ಕೆ ಬಲವಂತದಿಂದ ಮತಾಂತರಿಸಲಾಗಿದೆ ► ಸಾಮಾಜಿಕ ಕಾರ್ಯಕರ್ತ ತಿಮ್ಮಪ್ಪ ವಿ.ಕೆ. ಆರೋಪ

(ನ್ಯೂಸ್ ಕಡಬ) newskadaba.com ಕಡಬ, ಮಾ.19. ದಲಿತ ಸಂಘರ್ಷ ಸಮಿತಿ ಮುಖಂಡನ ನೇತೃತ್ವದಲ್ಲಿ ಹನ್ನೊಂದು ಜನ ಹಿಂದುಗಳು ಕಡಬ ತಾಲೂಕಿನ ಆಲಂಕಾರಿನಲ್ಲಿ ಬೌದ್ಧ ಧರ್ಮಕ್ಕೆ ಧರ್ಮಾಂತರವಾಗಿರುವುದು ಸ್ವಯಂಪ್ರೇರಿತ ಧರ್ಮ ಸ್ವೀಕಾರ ಅಲ್ಲ. ಅದು ಕಾನೂನುಬಾಹಿರವಾಗಿದ್ದು, ಬಲವಂತದ ಮತಾಂತರ ಎಂದು ಸಾಮಾಜಿಕ ಕಾರ್ಯಕರ್ತ, ಮೊಗೇರ ಸಮುದಾಯದ ಮುಂದಾಳು ತಿಮ್ಮಪ್ಪ ವಿ.ಕೆ ಆರೋಪಿಸಿದ್ದಾರೆ.

ಅವರು  ಕಡಬ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಮಾಯಕ ಜನರನ್ನು ಬೌದ್ಧ ಧರ್ಮಕ್ಕೆ ಮತಾಂತರಗೊಳಿಸುವ ಮೂಲಕ ದಲಿತ ಸಮಾಜದ ಮೇಲೆ ದಾಳಿ ಮಾಡುವ ಹುನ್ನಾರವಾಗಿದೆ. ದಲಿತ ಸಮುದಾಯದ ಜನರಿಗೆ ಉತ್ತಮ ಶಿಕ್ಷಣ ನೀಡುವುದು, ಅವರಲ್ಲಿನ ದುಶ್ಚಟ ಹಾಗೂ ಬಡತನ ನಿರ್ಮೂಲನೆ ಮಾಡುವುದನ್ನು ಬಿಟ್ಟು, ದ.ಸಂ.ಸಮಿತಿಗಳ ಹೆಸರನ್ನು ಬಳಕೆ ಮಾಡಿಕೊಳ್ಳುತ್ತಾ ಮತಾಂತರದಂತಹ ಕಾರ್ಯಕ್ಕೆ ಮುಂದಾಗುತ್ತಿರುವುದ್ದಕ್ಕೆ ನನ್ನ ಪ್ರಬಲ ವಿರೋಧ ಇದೆ ಹಾಗೂ ಇದರ ವಿರುದ್ಧ ಹೋರಾಟಕ್ಕೂ ಸಿದ್ಧನಿದ್ದೇನೆ. ಕಡಬದಲ್ಲಿ ಕರ್ನಾಟಕ ದ.ಸಂ.ಸಮಿತಿ(ಪ್ರೋ.ಕೃಷ್ಣಪ್ಪ ಬಣ), ದ.ಸಂ.ಸಮಿತಿ(ಅಂಬೇಡ್ಕರ್ ವಾದ), ದ.ಸೇ.ಸಮಿತಿಗಳು ಸಕ್ರೀಯವಾಗಿದ್ದುಕೊಂಡು ಉತ್ತಮ ಕೆಲಸಗಳನ್ನು ಮಾಡುತ್ತಿವೆ. ಆದರೆ ಈ ಸಂಘಟನೆಗಳ ನಿಜವಾದ ಉದ್ದೇಶವೇನು?, ಈ ಸಂಘಟನೆಗಳ ಪಾತ್ರವೇನು? ಎನ್ನುವ ಬಗ್ಗೆ ಸಾರ್ವಜನಿಕರಿಗೆ ತಿಳಿಯಬೇಕಿದೆ.ಮತಾಂತರ ವಿಷಯ ಒಬ್ಬ ವ್ಯಕ್ತಿಯ ಪ್ರಶ್ನೆಯಾಗಿರದೆ ಸಮಾಜದ, ಸಮುದಾಯದ ಪ್ರಶ್ನೆಯಾಗಿದ್ದು, ನನ್ನ ಸಮಾಜಕ್ಕೆ ದಾಳಿಯಾದಾಗ ನಾನು ಸುಮ್ಮನಿರುವುದು ಸರಿಯಲ್ಲ. ಮತಾಂತರದ ಬಗ್ಗೆ ಹಲವೆಡೆ ಪ್ರತ್ಯೇಕವಾಗಿ ಮುಗೇರ ಸಮುದಾಯದಲ್ಲಿ ವಿರೋಧವಿದೆ. ಮತಾಂತರಕ್ಕಾಗಿ ಕಡಬ, ಆಲಂಕಾರು, ರಾಮಕುಂಜ, ನೆಲ್ಯಾಡಿ, ಕೊಂಬಾರು ಭಾಗಗಳಲ್ಲಿ ಗುಪ್ತ ಸಭೆಗಳನ್ನು ಮಾಡುವ ಮೂಲಕ ಅಂಬೇಡ್ಕರ್ ಹೆಸರು ಬಳಸಿ ಮತಾಂತರಕ್ಕೆ ಪ್ರೇರೇಪಿಸುತ್ತಿರುವ ಹಲವರ ಪೈಕಿ ಆಲಂಕಾರಿನಲ್ಲಿ ಮತಾಂತರದ ನೇತೃತ್ವ ವಹಿಸಿದ್ದ ಆನಂದ ಮಿತ್ತಬೈಲ್ ಕೂಡ ಒಬ್ಬರು. ಒಂದು ಮಾಹಿತಿಯ ಪ್ರಕಾರ ಐವತ್ತಕ್ಕೂ ಅಧಿಕ ಮಂದಿ ದಲಿತ ಸಮುದಾಯದ ಜನ ಬೌದ್ಧ ಧರ್ಮಕ್ಕೆ ಸೇರುವ ವಿಚಾರ ಬೆಳಕಿಗೆ ಬಂದಿದೆ. ಇವರಿಗೆ ಹಿಂದು ಧರ್ಮದಲ್ಲಿ ಅನ್ಯಾಯವಾದರೆ, ಶೋಷಣೆಯಾದರೆ ಅವುಗಳ ವಿರುದ್ಧ ಕಾನೂನಾತ್ಮಕವಾಗಿ ಹೋರಾಟ ಮಾಡಲು ಅವಕಾಶವಿದೆ. ಅದನ್ನು ಬಿಟ್ಟು ಈ ರೀತಿ ಪ.ಜಾ ಮತ್ತು ಪ.ಪಂ.ರವರನ್ನು ಆಮೀಷವೊಡ್ಡಿ ಮತಾಂತರ ಮಾಡುವುದು ಘೋರ ಅನ್ಯಾಯವಾಗಿದೆ. ಮುಂದಿನ ದಿನಗಳಲ್ಲಿ ಈ ಆಮಿಷದ ಮತಾಂತರದ ಬಗ್ಗೆ ದಾಖಲೆ ಬಿಡುಗಡೆ ಮಾಡಲಾಗುವುದು ಮಾತ್ರವಲ್ಲ ಠಾಣೆಯಲ್ಲಿ ನಡೆಯುವ ಎಸ್.ಸಿ/ಎಸ್.ಟಿ ಸಭೆಗಳಲ್ಲೂ ಗಮನಕ್ಕೆ ತರಲಾಗುವುದು.

Also Read  ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಕಿರುತೆರೆಯ ಖ್ಯಾತ ನಟಿ..!!

ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಮುಖಂಡ ಎಂದು ಹೆಳಿಕೊಳ್ಳುವ ಆನಂದ ಮಿತ್ತಬೈಲು, ಬೌದ್ಧ ಧರ್ಮಕ್ಕೆ ಸೇರಿಕೊಂಡು ಏಳು ವರ್ಷವಾಗಿದೆ. ಇದಕ್ಕೂ ಮುನ್ನ ಅವರು ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡು ಸುದ್ದಿಯಲ್ಲಿದ್ದರು. ಈಗ ಅವರು ಹಿಂದು, ಮುಸ್ಲಿಂ, ಬೌದ್ಧ ಯಾವುದೆಂದು ಸ್ಪಷ್ಟಪಡಿಸಬೇಕು. ಏಳು ವರ್ಷಗಳಲ್ಲಿ ಏನು ಸಾಮಾಜಿಕ ಬದಲಾವಣೆ ಆಗಿದೆ ಎಂಬುದನ್ನು ಸಾಬಿತುಪಡಿಸಬೇಕು, ಆಲಂಕಾರಿನಲ್ಲಿ ಹನ್ನೋಂದು ಜನ ಸ್ವಯಂ ಪ್ರೇರಿತವಾಗಿ ಮತಾಂತರವಾಗಿದ್ದಾರೆ ಎಂದು ಆನಂದ ಮಿತ್ತಬೈಲ್ ಹೇಳಿದ್ದಾರೆ. ಹನ್ನೊಂದು ಜನರ ವಿವರಗಳು ಮಾತ್ರ ಲೆಕ್ಕಕ್ಕೆ ಸಿಕ್ಕಿದ್ದು, ಹೆಸರು ಹೇಲಳು ಇಚ್ಚಿಸದ ಇನ್ನೂ ಅನೇಕರು ಮತಾಂತರವಾಗಿದ್ದಾರೆ. ಕೆಲವರ ಹೆಸರನ್ನು ಗೌಪ್ಯವಾಗಿಡಲಾಗಿದೆ. ಸ್ವಯಂಪ್ರೆರಿತವಾಗಿ ಮತಾಂತರವಾಗುವುದಾದರೆ ಎಲ್ಲರೂ ದಲಿತರೇ ಯಾಕೆ ಆಗಬೇಕು? ಅವರಿಗೆ ಅಶೋಕ ಅಥವಾ ಬುದ್ಧ, ಅಂಬೇಡ್ಕರ್ ಅವರು ಕನಸಲ್ಲಿ ಬಂದು ಹೇಳಿದ್ದಾರಾ ಅಥವಾ ಬುದ್ಧಿಷ್ಠ್‌ ಅಕಾಡೆಮಿಯವರು ಕಾರ್ಯಕ್ರಮ ಆಯೋಜಿಸಿ ಮತಾಂತರಗೊಳಿಸಿ ಎಂದು ಪ್ರೇರೇಪಣೆ ನೀಡಿದ್ದಾರ?, ಬೇರೆ ಜಾತಿ, ಧರ್ಮದವರು ಒಬ್ಬರು ಯಾಕೆ ಸ್ವಯಂಪ್ರೇರಿತವಾಗಿ ಮತಾಂತರವಾಗಿಲ್ಲ. ಈ ಮತಾಂತರದ ಹಿಂದೆ ಯಾವುದೋ ಹುನ್ನಾರವಿದೆ, ಕೆಲವರ ಕೈವಾಡವಿದೆ ಎಂದು ಆರೋಪಿಸಿದರು. ದಲಿತರು ದಾಸ್ಯದಿಂದ ಹಾಗೂ ದುಶ್ಚಟಗಳಿಂದ ಮುಕ್ತರಾಗಿ ಸರ್ವಸಮಾನತೆ ಸಾರುವ ಬೌದ್ಧ ಧರ್ಮ ಸೇರಬೇಕೆಂಬುವುದು ಅಂಬೇಡ್ಕರ್ರವರ ಆಶಯವಾಗಿದೆ. ಆದರೆ ನಮ್ಮಲ್ಲಿ ನಮ್ಮ ತಪ್ಪುಗಳನ್ನು ಮುಂದುವರೆಸುತ್ತಾ ಒಂದೆಡೆ ಬೌದ್ಧ ಧರ್ಮ ಸ್ವಿಕರಿಸಿ ಇನ್ನೊಂದೆಡೆ ಸರಕಾರದಿಂದ ಸವಲತ್ತುಗಳನ್ನು ಪಡೆಯುವುದು ನ್ಯಾಯಸಮ್ಮತವಲ್ಲ. ಬೌದ್ಧ ಧರ್ಮಕ್ಕೆ ಸೇರಿರುವ ಆನಂದ ಮಿತ್ತಬೈಲ್ ರವರ ನೀತಿಗಳು ದ್ವಂದ್ವ ರೀತಿಯಲ್ಲಿವೆ. ಇವರು ಸಮಾಜವನ್ನು ಬದಲಾವಣೆ ಮಾಡುವುದಕ್ಕಿಂತ ಮೊದಲು ಸ್ವತಃ ಇವರ ಮಗನನ್ನು ದುಶ್ಚಟದ ದಾಸ್ಯದಿಂದ ಮುಕ್ತಿಗೊಳಿಸುವ ಕೆಲಸಮಾಡಲಿ ಎಂದು ಹೇಳಿದ ತಿಮ್ಮಪ್ಪ, ಈ ಮತಾಂತರದ ಎಲ್ಲಾ ಬೆಳವಣಿಗೆ ಬಗ್ಗೆ ದಲಿತ ಸಮುದಾಯದಲ್ಲಿ ಅರಿವು ಮೂಡಿಸುವ ಕೆಲಸಗಳನ್ನು ಮಾಡುವುದಲ್ಲದೆ ಮೊಗೇರ ಸಂಘಟನೆಯ ರಾಜ್ಯ ಮುಖಂಡರ ಗಮನಕ್ಕೆ ತರಲಾಗುವುದು ಎಂದು ಹೇಳಿದರು.

Also Read  ಚುನಾವಣೆಗಾಗಿ ದೇಣಿಗೆ ನೀಡಿದ ಗ್ರಾಮಸ್ಥರು     ➤ಸ್ಪೀಕರಿಸಿ ಭಾವುಕರಾದ ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು

error: Content is protected !!
Scroll to Top