‘ರಾಜ್ಯದಲ್ಲಿ 68,450 ಹೆಚ್ ಐವಿ ಪ್ರಕರಣ ದಾಖಲೆ’                ದಿನೇಶ್ ಗುಂಡೂರಾವ್  ಹೇಳಿಕೆ

(ನ್ಯೂಸ್ ಕಡಬ)newskadaba.com ಬೆಂಗಳೂರು, ಆ.13.  ರಾಜ್ಯದಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ 68,450 ಹೆಚ್ ಐವಿ ಪ್ರಕರಣಗಳು ವರದಿಯಾಗಿವೆ. ಒಟ್ಟಾರೆ ರಾಜ್ಯದಲ್ಲಿ 2.28 ಲಕ್ಷ ಹೆಚ್ ಐ ವಿ ಸೋಂಕಿತರು ಮತ್ತು ಈ ಪೈಕಿ 1.91 ಲಕ್ಷ ಹೆಚ್ ಐ ವಿ ಸೋಂಕಿತರು ಮಾತ್ರ ನಿಯಮಿತವಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಸಚಿವ ತಿಳಿಸಿದ್ದಾರೆ.

ಆರೋಗ್ಯ ಸೌಧದಲ್ಲಿ ಹಮ್ಮಿಕೊಂಡಿದ್ದ ‘ಅಂತಾರಾಷ್ಟ್ರೀಯ ಯುವ ದಿನಾಚರಣೆ’ ಹಾಗೂ ಹೆಚ್ ಐ ವಿ ತಡೆಗಟ್ಟಲು ತೀವ್ರಗೊಳಿಸಿದ ಐಇಸಿ ಪ್ರಚಾರಾಂದೋಲನ ಕುರಿತ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತವು ಹೆಚ್ ಐ ವಿ/ಏಡ್ಸ್ ಜೊತೆಗೆ ಗಮನಾರ್ಹವಾದ ಆರೋಗ್ಯ ಸವಾಲನ್ನು ಎದುರಿಸುತ್ತಿದೆ. ವಿಶ್ವದಲ್ಲಿ ಹೆಚ್ ಐ ವಿಯೊಂದಿಗೆ ಬದುಕುತ್ತಿರುವ ಎರಡನೇ ಅತಿ ಹೆಚ್ಚು ಜನರನ್ನು ಭಾರತ ಹೊಂದಿದೆ ಎಂದು ವರದಿ ತಿಳಿಸಿದೆ.

Also Read  ಬಂಟ್ವಾಳ: ತುಳು ಲಿಪಿ ನಾಮಫಲಕ ಅನಾವರಣ

error: Content is protected !!
Scroll to Top