KSR ರೈಲು ನಿಲ್ದಾಣದ ಆವರಣದಲ್ಲಿ ಅಪರಿಚಿತ ಶವ ಪತ್ತೆ ಪ್ರಕರಣ                 ಮುಂದುವರಿದ ತನಿಖೆ

(ನ್ಯೂಸ್ ಕಡಬ)newskadaba.com ಬೆಂಗಳೂರು, ಆ.10.  ಮೆಜೆಸ್ಟಿಕ್‌ನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಪಾರ್ಕಿಂಗ್ ಪ‍್ರದೇಶದಲ್ಲಿ ಶವವಾಗಿ ಪತ್ತೆಯಾಗಿದ್ದ 5 ವರ್ಷದ ಬಾಲಕಿಯ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಪತ್ತೆಯಾದ ಬಾಲಕಿಯನ್ನು ಮರಿಯಮ್‌ ಎಂದು ಗುರುತಿಸಲಾಗಿದೆ. ಶಿವು ಎಂಬುವವರು ತಮ್ಮ ಪುತ್ರಿ ಎಂದು ಗುರುತಿಸಿದ್ದರು. ಬಾಲಕಿಯನ್ನು ರಾಜಾ ಅಲಿಯಾಸ್ ಮಣಿಕಂಠ ಮತ್ತು ಹೀನಾ, ಅಲಿಯಾಸ್ ಕಾಳಿ ಹತ್ಯೆ ಮಾಡಿದ್ದು, ಇವರ ಕುರಿತು ಮಾಹಿತಿ ನೀಡಿದವರಿಗೆ ಬಹುಮಾನವನ್ನೂ ಘೋಷಿಸಲಾಗಿತ್ತು. ಇಬ್ಬರ ವಿರುದ್ಧ ಬಿಎನ್‌ಎಸ್‌ನ ಸೆಕ್ಷನ್ 103 ಮತ್ತು 208 ರ ಅಡಿಯಲ್ಲಿ ಪ್ರಕರಣಗಳು ದಾಖಲಾಗಿತ್ತು. ಆದರೆ, ದೂರು ನೀಡಿದ್ದ ಶಿವು ಅವರ ಪುತ್ರಿ ಜೀವಂತವಾಗಿದ್ದು, ಕೋಲಾರದಲ್ಲಿ ಪತ್ತೆಯಾಗಿದ್ದಾಳೆ. ಹೀಗಾಗಿ, ರೈಲ್ವೇ ನಿಲ್ದಾಣದಲ್ಲಿ ಪತ್ತೆಯಾದ ಬಾಲಕಿಯ ಶವದ ಕುರಿತು ಮತ್ತೆ ನಿಗೂಢತೆಗಳು ಮುಂದುವರೆದಿದೆ.

Also Read  ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಕೇಸ್     ಆರೋಪಿ ಆತ್ಮಹತ್ಯೆಗೆ ಶರಣು         

error: Content is protected !!
Scroll to Top