ಕುಸುಮ್ ಯೋಜನೆಯಡಿ ಶೇ. 80 ಸಬ್ಸಿಡಿ ಸೌರಶಕ್ತಿ ಆಧಾರಿತ ಕೃಷಿ ಪಂಪ್ ಸೆಟ್  ಸಚಿವ ಕೆ. ಜೆ ಜಾರ್ಜ್                      

(ನ್ಯೂಸ್ ಕಡಬ)newskadaba.com ಚಿಕ್ಕಾಬಳ್ಳಾಪುರ, ಆ.09. ಕೊಳವೆಬಾವಿ ಮತ್ತು ನೀರು ಹೊಂದಿರುವ ರೈತರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವದ ಕುಸುಮ್ ಯೋಜನೆಯಡಿ ಶೇಕಡ 80 ಸಬ್ಸಿಡಿ ಸೌರಶಕ್ತಿ ಆಧಾರಿತ ಕೃಷಿ ಪಂಪ್ ಸೆಟ್, ಮೋಟರ್, ಪ್ಯಾನಲ್ ಬೋರ್ಡ್ ನೀಡಲಾಗುವುದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೌರಶಕ್ತಿ ಆಧಾರಿತ ಕೃಷಿ ಪಂಪ್ ಸೆಟ್ಗಳಿಗೆ ಬೇಡಿಕೆ ಹೆಚ್ಚಾಗಿದ್ದು, ರೈತರು ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವದಡಿ ಜಾರಿ ಮಾಡಿರುವ ಕೃಷಿ ಪಂಪ್ ಸೆಟ್ ಗಳಿಗೆ ಸೌರಶಕ್ತಿ ಒದಗಿಸುವ ಕುಸುಮ್ ಬಿ ಯೋಜನೆ ಚಾಲ್ತಿಯಲ್ಲಿದೆ ಎನ್ನಲಾಗಿದೆ.

Also Read  ಕಾಸರಗೋಡು: ಬೈಕ್ ಮತ್ತು ಟ್ಯಾಂಕರ್ ಲಾರಿ ನಡುವೆ ಅಪಘಾತ ➤ ಇಬ್ಬರು ಸವಾರರು ಮೃತ್ಯು

error: Content is protected !!
Scroll to Top