(ನ್ಯೂಸ್ ಕಡಬ)newskadaba.com ಗದಗ, ಆ.09. ಟೊಮೆಟೋ ಬೆಳೆಗೆ ದಿಢೀರನೆ ಬೆಲೆ ಕುಸಿದ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯ ಲಕ್ಷ್ಮೇಶ್ವರದ ಸಗಟು ಮಾರುಕಟ್ಟೆಗೆ ಹೋಗುವ ರಸ್ತೆಗಳಲ್ಲಿ ಟೊಮೆಟೋ ಸುರಿದ ರೈತರು, ವರ್ತಕರ ಮೇಲೆ ಆಕ್ರೋಶಗೊಂಡ ವ್ಯಕ್ತಪಡಿಸಿದರು ಎನ್ನಲಾಗಿದೆ.
ಲಾಭದ ನಿರೀಕ್ಷೆಯಲ್ಲಿ ಲಕ್ಷ್ಮೇಶ್ವರ, ಶಿರಹಟ್ಟಿ ಹಾಗೂ ಸಮೀಪದ ಇತರೆ ಗ್ರಾಮಗಳ ಅನೇಕ ರೈತರು ಬೆಳಗ್ಗೆಯೇ ಮಾರುಕಟ್ಟೆಗೆ ಟೊಮೆಟೊ ತಂದಿದ್ದರು. ಆದರೆ, ಒಂದು ಕ್ರೇಟ್ ಟೊಮೇಟೊ ಬೆಲೆ 20 ರಿಂದ 30 ರೂ.ವರೆಗೆ ಇದೆ ಎಂದು ವ್ಯಾಪಾರಿಗಳು ಹೇಳಿದಾಗ, ಆಘಾತಕ್ಕೊಳಗಾದರು ಎಂ ವರದಿ ತಿಳಿಸಿದೆ.
