ವಯನಾಡ್ ಗೆ ಪ್ರಧಾನಿ ಮೋದಿ ಭೇಟಿ 417 ಕ್ಕೆ ತಲುಪಿದ ಸಾವಿನ ಸಂಖ್ಯೆ  

(ನ್ಯೂಸ್ ಕಡಬ)newskadaba.com ವಯಾನಾಡು, ಆ.09. ಕೇರಳದ ಭೂಕುಸಿತ ಪೀಡಿತ ವಯನಾಡ್ ಜಿಲ್ಲೆಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದಾರೆ. ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ವಿಪತ್ತು ವಲಯದಲ್ಲಿ ಸೇನೆ ನಿರ್ಮಿಸಿದ ಪರಿಹಾರ ಶಿಬಿರ, ಆಸ್ಪತ್ರೆ ಮತ್ತು ಬೈಲಿ ಸೇತುವೆಯ ಬಳಿ ಮೋದಿ ಇಳಿಯಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೋದಿ ಅವರು ವಿಪತ್ತು ವಲಯದ ವೈಮಾನಿಕ ಸಮೀಕ್ಷೆಯನ್ನೂ ನಡೆಸಲಿದ್ದಾರೆ. ವಿಶೇಷ ವಿಮಾನದ ಮೂಲಕ ಕಣ್ಣೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಅವರು ಐಎಎಫ್ ಹೆಲಿಕಾಪ್ಟರ್ ಮೂಲಕ ವಯನಾಡ್ ಗೆ ತೆರಳಲಿದ್ದಾರೆ. ಪ್ರಧಾನಿ ಭೇಟಿ ಬಳಿಕ ಅವರು ವಯನಾಡ್ ದುರಂತವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವ ಸಾಧ್ಯತೆ ಇದೆ.

Also Read  ಫೆಬ್ರವರಿಯಲ್ಲಿ ಸಿಎಂ ಬೊಮ್ಮಾಯಿ ಕಡಬ,ಸುಬ್ರಹ್ಮಣ್ಯಕ್ಕೆ ಆಗಮನ ➤  ಸಚಿವ ಎಸ್.ಅಂಗಾರ

 

 

 

error: Content is protected !!
Scroll to Top