ನೇಣು ಬಿಗಿದು ಮಹಿಳೆ ಆತ್ಮಹತ್ಯೆ

(ನ್ಯೂಸ್ ಕಡಬ)newskadaba.com  ಬೆಂಗಳೂರು, ಆ.07.  ಮಲ್ಲೇಶ್ವರ ಅಪಾರ್ಟ್‌ಮೆಂಟ್‌ವೊಂದರಲ್ಲಿ ಅಪರಿಚಿತ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಕೆಯ ಪತ್ತೆಗಾಗಿ ನಗರದ ಎಲ್ಲಾ ಠಾಣೆಗಳಿಗೆ ಮಾಹಿತಿ ನೀಡಲಾಗಿದೆ ಎಂದು ವರದಿ ತಿಳಿಸಿದೆ.

ಮಲ್ಲೇಶ್ವರಂನ ಮಾರ್ಗೋಸಾ ರಸ್ತೆಯ 15ನೇ ಕ್ರಾಸ್‌ನಲ್ಲಿರುವ ನಾಲ್ಕು ಅಂತಸ್ತಿನ ವಸತಿ ಕಟ್ಟಡದಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಗಿದ್ದು, ಮಹಿಳೆ ಕಟ್ಟಡದ ನಿವಾಸಿಯಾಗಿರಲಿಲ್ಲ. ಬೆಳಿಗ್ಗೆ 7.30 ರಿಂದ 7.45 ರ ನಡುವೆ ನಾಯಿಯೊಂದು ನಿರಂತರವಾಗಿ ಬೊಗಳಲು ಪ್ರಾರಂಭಿಸಿದ ನಂತರ ಕಟ್ಟಡದ ನಿವಾಸಿಯೊಬ್ಬರು ತಮ್ಮ ಫ್ಲಾಟ್‌ನಿಂದ ಹೊರಗೆ ಬಂದು ಪರಿಶೀಲಿಸಿದಾಗ ನಾಲ್ಕನೇ ಮಹಡಿಯಲ್ಲಿನ ಮೆಟ್ಟಿಲುಗಳ ಬಳಿ ಮಹಿಳೆ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Also Read  ಹೆಲ್ಮೆಟ್​ ಧರಿಸದೆ ಮಹಿಳಾ ಪಿಎಸ್​ಐ ಸಂಚಾರ..! ➤ ಪ್ರಕರಣ ದಾಖಲು

error: Content is protected !!
Scroll to Top