ವಯನಾಡು ಭೂಕುಸಿತ        ಸಂತ್ರಸ್ತರಿಗೆ 25 ಲಕ್ಷ ರೂ. ದೇಣಿಗೆ ನೀಡಿದ ಅಲ್ಲು ಅರ್ಜುನ್

(ನ್ಯೂಸ್ ಕಡಬ)newskadaba.com ತಿರುವನಂತಪುರಂ,ಆ.06. ಭೂಕುಸಿತದಿಂದ ವಯನಾಡು ಅಕ್ಷರಶಃ ನಲುಗಿ ಹೋಗಿದ್ದು, ನೂರಾರು ಮಂದಿ ಸಾವನ್ನಪ್ಪಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಈ ನಡುವೆ ತೆಲುಗಿನ ಸ್ಟಾರ್ ನಟ ಅಲ್ಲು ಅರ್ಜುನ್ ಸಂತ್ರಸ್ತರಿಗೆ ನೆರವಾಗಲು ಮುಂದಾಗಿದ್ದಾರೆ.

ವಯನಾಡು ಭೂಕುಸಿತ ದುರಂತದಿಂದಾಗಿ ಸಮಕಷ್ಟದಲ್ಲಿರುವವರಿಗೆ ರಶ್ಮಿಕಾ ಮಂದಣ್ಣ, ಮೋಹನ್ ಲಾಲ್ ಅವರು ಸಹಾಯ ಮಾಡಿದ್ದಾರೆ. ಇದೀಗ ಅಲ್ಲು ಅರ್ಜುನ್ 25 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಈ ಕುರಿತು ಸ್ವತಃ ನಟ ಅಲ್ಲು ಅರ್ಜುನ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

Also Read  ಅರಂತೋಡು: ನೂತನ ಪ್ರಯಾಣಿಕರ ತಂಗುದಾಣ ಉದ್ಘಾಟನೆ

error: Content is protected !!
Scroll to Top