ಹಾಶಿಂ ಬನ್ನೂರು ಅವರ ಅಂಕಣ ಬರಹ ಎಚ್ಚರಿಕೆಯ ಗಂಟೆ ಬಾರಿಸುತಿವೆ ಪ್ರಕೃತಿಯ ದುರಂತಗಳು..!.

(ನ್ಯೂಸ್ ಕಡಬ)newskadaba.com ಆ.06. ನಮ್ಮ ರಾಜ್ಯ ಹಾಗೂ ನೆರೆ ರಾಜ್ಯಗಳಲ್ಲಿ ನಿರಂತರ ದಿನಗಳಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಶಾಲಾ ಕಾಲೇಜು ಹಾಗೂ ಸಂಸ್ಥೆಗಳಲ್ಲಿ ರಜೆಯನ್ನು ಕೂಡ ಘೋಷಿಸಿದೆ. ಇದು ನಿರಂತರ ಮಾಧ್ಯಮದಲ್ಲಿ ಕೇಳುತ್ತಿರುವ ಕಾಣುತ್ತಿರುವ ಸುದ್ದಿ. ಪ್ರಕೃತಿ ವಿಕೋಪಗಳಿಂದಾಗಿ ನಮ್ಮ ಸುತ್ತಮುತ್ತಲು ದುರಂತಗಳು ದೈನಂದಿನವಾಗಿ ಏರುತ್ತಿವೆ, ಹೆಚ್ಚಿನ ಮಳೆ, ಭೂಮಿ,ಗುಡ್ಡ ಬೆಟ್ಟಗಳ ಕುಸಿತ, ನದಿ ಕೆರೆಗಳು ತುಂಬಿ ತುಳುಕುತ್ತಿದೆ. ಇದರಿಂದ ಪರಿಸರ ನಾಶವಾಗುತ್ತಿದೆ ಅಲ್ಲದೇ ಮನುಷ್ಯ ಪ್ರಾಣಿ ಸಂಕುಲಕ್ಕೆ ಹಾನಿ ಮತ್ತು ತೊಂದರೆಗಳು ಎದುರಾಗುತ್ತಿವೆ. ರಸ್ತೆಗಳು ದಾರಿ ಮನೆ ಹಾಗೂ ವಿಶಾಲ ಪ್ರದೇಶಗಳು ನೀರಿನಿಂದ ಆವೃತಗೊಂಡಿದೆ. ಜನ ಸಂಚಾರ ವಾಹನ ಚಲಾವಣೆ ಎಲ್ಲವೂ ಸಂಕಷ್ಟಕರವಾಗಿದೆ. ಎಡ ಬಿಡದೆ ಬರುವ ಮಳೆ, ವೇಗವಾಗಿ ಬೀಸುವ ಗಾಳಿ ಮನೆ ಕಟ್ಟಡಗಳಿಗೆ ಹಾಗೂ ಗಿಡ ಮರಗಳು ಧರೆಗುರುಳಿ ಉಂಟಾಗುತ್ತಿರುವ ಹಾನಿಗಳು ಎಲ್ಲವೂ ಮನುಷ್ಯ ರಲ್ಲಿ ಭಯದ ವಾತಾವರಣ ಉಂಟುಮಾಡಿದೆ. ಜೀವನ್ಮರಣ ಹೋರಾಟದ ನಡುವೆ ಕೆಲವು ಜೀವಗಳು ಮಣ್ಣಿನಲ್ಲಿ ಮಾಯವಾಗಿ ಇನ್ನು ಕೆಲವು ಜೀವಗಳು ಮೃತವಾಗಿ. ಕಣ್ಣು ಮುಂದೆಯೇ ನೀರಿನಲ್ಲಿ ಜನ ಕೊಚ್ಚಿ ಹೋಗುವ ದೃಶ್ಯ ನಿಜಕ್ಕೂ ಭಯಾನಕರ ಸನ್ನಿವೇಶವೇ ಬಂದಾಗಿದೆ. ಇದು ದೇವರ ಪರೀಕ್ಷೆಯೋ..? ಮನುಷ್ಯ ಮಾಡಿರುವ ತಪ್ಪಿಗೆ ಶಿಕ್ಷೆಯೋ..? ದೇವನೇ ಬಲ್ಲ.

Also Read  ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿಯ ಪ್ರಾದೇಶಿಕ ಕಚೇರಿಗೆ ಸಿಎಂ ಸಿದ್ದರಾಮಯ್ಯ ಶಂಕು ಸ್ಥಾಪನೆ

ಮನುಷ್ಯನು, ಪ್ರಾಣಿ, ಪಕ್ಷಿ ಸಕಲ ಜೀವ ರಾಶಿಗಳು, ಚರಾಚರಗಳು ಇಲ್ಲಿ ಬದುಕಬೇಕಾದರೆ ಅವುಗಳ ಬೆಳವಣಿಗೆಗೆ ಪರಿಸರವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಪ್ರತಿಯೊಂದು ಜೀವ ಸಂಕುಲಕ್ಕೆ ಆವಶ್ಯಕತೆಯಿರುವ ನೀರು, ಗಾಳಿ, ಬೆಳಕು, ಆಹಾರ ಇತರ ಆವಶ್ಯಕತೆಗೆ ಭೂಮಿಯನ್ನು ಅವಲಂಬಿಸಿದೆ. ಆದರೆ ಮನುಷ್ಯನು ಮಾಡುವ ಕೆಲವು ಕೆಲಸಗಳಿಂದ ದೈನಂದಿನ ನೀರು, ಗಾಳಿ, ಪರಿಸರ ತ್ಯಾಜ ವಿಷ ಅವಶೇಷಗಳಿಂದ ನಾಶವಾಗುತ್ತಿದೆ. ಪರಿಸರವನ್ನು ಸಂರಕ್ಷಿಸಬೇಕಾದ ನಾವು ನಮ್ಮ ಲಾಭಕ್ಕಾಗಿ ಪರಿಸರವನ್ನು ದುರುಪಯೋಗ ಮಾಡುತ್ತಿದ್ದೇವೆ.
ನಮಗೆ ಬೇಕಾದ ಆಮ್ಲಜನಕ, ನೆರಳು, ಹಾಗೂ ಪರಿಸರವನ್ನು ತಂಪಾಗಿಡಲು ಗಿಡ ಮರಗಳು ಬಹಳ ಅವಶ್ಯಕ ಅವುಗಳ್ನು ಸಾದ್ಯವಾದಷ್ಟು ಬೆಳೆಸಬೇಕಾಗಿದೆ. ಆದರೆ ಗಿಡ ಮರ ಕಡಿಯುವುದು ಕೂಡಾ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ ಇದರಿಂದ ನಮ್ಮ ಪರಿಸರ ನಾಶವಾಗುತ್ತಿದೆ. ಮನುಷ್ಯನಿಗೆ ಆರೋಗ್ಯವಂತನಾಗಿರಲು ಪರಿಸರ ಬಹಳ ಅವಶ್ಯಕ, ನಾವು ಸ್ವಚ್ಛವಾಗಿರಲು ಮತ್ತು ನಮ್ಮ ಅವಶ್ಯಕತೆಗೆ ನೀರು ಬಹಳ ಮುಖ್ಯವಾಗಿದೆ. ನಾವು ಕೆರೆ, ಬಾವಿ, ನದಿ, ಮುಂತಾದವುಗಳಿಂದ ನೀರು ಬಳಸಿಕೊಳ್ಳುತ್ತೇವೆ. ಆದರೆ ವಿಷ ವಸ್ತುಗಳು, ಕಸ ಪ್ಲಾಸ್ಟಿಕ್ ಹಾಗೂ ಇನ್ನಿತರ ತ್ಯಾಜ್ಯಗಳನ್ನು ನೀರಿಗೆ ಬಿಡೂದು, ನೀರನ್ನು ಅಮಿತವಾಗಿ ಬಳಸೂದು ಇವುಗಳಿಂದ ತುಂಬಾ ತೊಂದರೆ ಅಲ್ಲದೆ ಪರಿಸರ ನಾಶಕ್ಕೆ ಇದೂ ಕೂಡ ಕಾರಣವಾಗುತ್ತಿದೆ.ಹೆಚ್ಚುತ್ತಿರುವ ವಾಹನ ಸಂಚಾರ, ಕಾರ್ಖಾನೆಗಳು ಮುಂತಾದವುಗಳಿಂದ ವಾಯು ದೂಳು ಮಸಿ ಎಲ್ಲವೂ ಕಲುಷಿತಗೊಂಡು ವಾಯುಮಾಲಿನ್ಯ ನಿಯಂತ್ರಣ ತಪ್ಪುತ್ತಿದೆ, ಶುದ್ಧ ವಾಯು ಸಿಗದೇ ಇದರಿಂದ ರೋಗಗಳು ಹೆಚ್ಚುತ್ತಿವೆ.

Also Read  ಶ್ರೀರಾಮ ಶಾಲೆಯಲ್ಲಿ ಜನಾರ್ಧನ ರೆಡ್ಡಿ ► ರೂ.26 ಲಕ್ಷ ದೇಣಿಗೆ

ಮುಂದಿನ ನಮ್ಮ ಪೀಳಿಗೆಯು ಉಳಿಯಬೇಕಾದರೆ ನಾವು ಈಗಾಗಲೇ ಜಾಗರೂಕತೆಯಿಂದ ಇರಬೇಕಾಗಿದೆ. ಪರಿಸರ ಪ್ರಕೃತಿಯ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಬೇಕಾಗಿದೆ. ಮಿತವಾದ ನೀರಿನ ಬಳಕೆ, ಶುದ್ಧ ನೀರು ಬಳಸಿಕೊಳ್ಳೂದು, ತ್ಯಾಜ್ಯಗಳನ್ನು ಕಸ, ಹಾಗೂ ವಿಷ ವಸ್ತುಗಳು ನೀರಿಗೆ ಹಾಕದೇ ಇರೂದು. ಶುದ್ಧ ಆಮ್ಲಜನಕ ಪೂರೈಕೆಗೆ ಗಿಡ ಮರ ಬೆಳೆಸೂದು, ಕಾಡುಗಳನ್ನು ಬೆಳೆಸುವುದು, ಗಿಡ ಮರ ಕಡಿಯದಂತೆ ನೋಡಿಕೊಳ್ಳೂದು. ನಮ್ಮ ಸುತ್ತ ಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಡೂದು ಇವುಗಳನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು. ಹಾಗಾದರೆ ಮಾತ್ರ ನಮ್ಮ ಪರಿಸರ ಪ್ರಕೃತಿಯನ್ನು ದುರಂತಗಳಿದ ಪಾರಾಗಿಸಲು ಸಾಧ್ಯ. ಇಲ್ಲವಾದಲ್ಲಿ ನಾವು ಮಾಡುವ ಕೃತ್ಯಕ್ಕೆ ಇನ್ನೂ ಭೀಕರತೆಯ ದುರಂತಗಳನ್ನು ಎದುರಿಸಬೇಕಾಗುತ್ತದೆ.

✍️: ಹಾಶಿಂ ಬನ್ನೂರು
8088507191

error: Content is protected !!
Scroll to Top