ಸಾಕ್ಸ್‌ ನೊಳಗೆ ವಿದೇಶಿ ಕರೆನ್ಸಿ ಕಳ್ಳಸಾಗಣೆ ಪಾಕ್ ಗಗನಸಖಿ ವಶಕ್ಕೆ  

(ನ್ಯೂಸ್ ಕಡಬ) newskadaba.com ಲಾಹೋರ್, ಆ.02. ಸಾಮಾನ್ಯವಾಗಿ ವಿಮಾನದಲ್ಲಿ ಪ್ರಯಾಣಿಸುವ ಪ್ರಯಾಣಿಕರು ಕಳ್ಳಸಾಗಾಣಿಕೆ ವ್ಯವಹಾರದಲ್ಲಿ ಸಿಕ್ಕಿಬಿದ್ದಿರುವ ಬಗ್ಗೆ ಸಾಕಷ್ಟು ಸುದ್ದಿ ಕೇಳಿರುತ್ತೇವೆ. ಆದರೆ ಇದೀಗ ಗಗನಸಖಿಯೊಬ್ಬಳು ವಿದೇಶಿ ಕರೆನ್ಸಿಯನ್ನು ತನ್ನ ಸಾಕ್ಸ್ ನಲ್ಲಿ ಕಳ್ಳಸಾಗಣೆ ಮಾಡಿದ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾಳೆ.

ಲಾಹೋರ್‌ನ ಅಲ್ಲಮಾ ಇಕ್ಬಾಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪಾಕಿಸ್ತಾನ್ ಇಂಟರ್ನ್ಯಾಷನಲ್ ಏರ್‌ಲೈನ್ಸ್‌ ನಲ್ಲಿ ಗಗನಸಖಿಯೊಬ್ಬಳು ವಿದೇಶಿ ಕರೆನ್ಸಿಯನ್ನು ಕಳ್ಳಸಾಗಣೆ ಮಾಡಿದ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾಳೆ. ಕಸ್ಟಮ್ಸ್ ಅಧಿಕಾರಿಗಳು, ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿ ಮತ್ತು ಇಮಿಗ್ರೇಶನ್ ಆಥೋರಿಟಿಯು ಜಂಟಿ ಕಾರ್ಯಾಚರಣೆ ನಡೆಸಿ ಗಗನಸಖಿಯ ಕಾಲಿನಲ್ಲಿರುವ ಸಾಕ್ಸ್ ಅನ್ನು ಪರಿಶೀಲನೆ ನಡೆಸಿದರು.

Also Read  ಭಾರತದಂತೆ ದಿಟ್ಟ ಹೆಜ್ಜೆಯನ್ನಿಟ್ಟ ಅಮೇರಿಕಾ➤ ಟಿಕ್‌ಟಾಕ್‌‌, ವಿಚಾಟ್ ಅಮೇರಿಕಾದಲ್ಲೂ ಬ್ಯಾನ್

error: Content is protected !!
Scroll to Top