(ನ್ಯೂಸ್ ಕಡಬ) newskadaba.com ಬೆಂಗಳೂರು, ಆ.02. ನಾಟಕೀಯ ಬೆಳವಣಿಗೆಯೊಂದರಲ್ಲಿ ಇನ್ಫೋಸಿಸ್ ಗೆ ನೀಡಿದ್ದ 32,403 ಕೋಟಿ ರೂಪಾಯಿಗಳ ಜಿಎಸ್ಟಿe ಡಿಮ್ಯಾಂಡ್ ನೋಟಿಸ್’ನ್ನು ರಾಜ್ಯ ಸರ್ಕಾರ ಹಿಂಪಡೆದಿದ್ದು, ಕೇಂದ್ರೀಯ ಜಿಎಸ್’ಟಿ ಗುಪ್ತಚರ ವಿಭಾಗಕ್ಕೆ ಉತ್ತರ ಕೊಡಬೇಕೆಂದು ಇನ್ಫೋಸಿಸ್’ಗೆ ಸೂಚಿಸಿದೆ. ರಾಜ್ಯ ಸರ್ಕಾರ, ತಾನು ನೀಡಿರುವ ಜಿಎಸ್ ಟಿ ನೋಟಿಸನ್ನು ಹಿಂಪಡೆದಿದೆ ಎಂದು ಖುದ್ದು ಇನ್ಫೋಸಿಸ್ ಸಂಸ್ಥೆಯೇ ಪ್ರಕಟಿಸಿದೆ.
ರಾಜ್ಯ ಸರ್ಕಾರವು ನೋಟಿಸ್ ಹಿಂಪಡೆದಿದ್ದು, 32,000 ಕೋಟಿ ರೂ. ತೆರಿಗೆ ಬಾಕಿ ಉಳಿಸಿಕೊಂಡಿರುವ ಆರೋಪಗಳ ಬಗ್ಗೆ ಕೇಂದ್ರೀಯ ಜಿಎಸ್ ಟಿ ಗುಪ್ತಚರ ವಿಭಾಗದ ಮಹಾ ನಿರ್ದೇಶಕರಿಗೆ ನೀವು ವಿವರಣೆ ಕೊಡಬೇಕು ಎಂದು ಸೂಚಿಸಿದೆ ಎಂದು ಇನ್ಫೋಸಿಸ್ ಪ್ರಕಟಣೆಯಲ್ಲಿ ತಿಳಿಸಿದೆ.