(ನ್ಯೂಸ್ ಕಡಬ) newskadaba.com ಬೆಂಗಳೂರು , ಆ.02. ಹೊರವಲಯದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಮೂರು ಜನರ ಸಾವಿಗೆ ಕಾರಣವಾಗಿದ್ದ ಮಕ್ನಾ ಕಾಡಾನೆಯನ್ನ ಕೊನೆಗೂ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ ಸೆರೆ ಹಿಡಿದಿದೆ.
ಸೆರೆಯಾದ ಕಾಡಾನೆಯು ವಿಚಿತ್ರ ಸ್ವಭಾವ ಹೊಂದಿದ್ದು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಹೊಂದಿಕೊಂಡಿರುವ ಗ್ರಾಮಗಳಲ್ಲಿ ಭಯದ ವಾತಾವರಣವನ್ನು ಸೃಷ್ಟಿ ಮಾಡಿತ್ತು. ದುಬಾರೆ ಹಾಗೂ ಮತ್ತಿಗೋಡುವಿನಿಂದ ಕುಮ್ಕಿ ಆನೆಗಳನ್ನು ಕರೆತಂದು ಎರಡು ದಿನ ಕಾರ್ಯಾಚರಣೆ ನಡೆಸಿ ಆನೆಯನ್ನ ಸೆರೆ ಹಿಡಿಯಲಾಗಿದೆ.