ನಾಲ್ವರು ಮುಸುಕುಧಾರಿಗಳಿಂದ ಅಪಾರ್ಟ್ ಮೆಂಟ್‌ಗೆ ನುಗ್ಗಲು ಯತ್ನ



(ನ್ಯೂಸ್ ಕಡಬ) newskadaba.com ಉಡುಪಿ, ಆ.02. ಅಪಾರ್ಟ್ ಮೆಂಟ್‌ನ ಫ್ಲಾಟ್‌ವೊಂದಕ್ಕೆ ನಾಲ್ವರು ಮುಸುಕುಧಾರಿಗಳು ನುಗ್ಗಲು ಯತ್ನಿಸಿ, ವಿಫಲರಾಗಿ ಸ್ಥಳದಿಂದ ಹಿಂತಿರುಗಿದ ಘಟನೆ ಉಡುಪಿಯ ಬ್ರಹ್ಮಗಿರಿಯಲ್ಲಿ ನಡೆದಿದೆ.





ನಾಲ್ವರು ಮುಸುಕುಧಾರಿ ವ್ಯಕ್ತಿಗಳು ರಾಡ್‌ಗಳನ್ನು ಹಿಡಿದು ಶಸ್ತ್ರಸಜ್ಜಿತವಾಗಿ ಅಪಾರ್ಟ್ ಮೆಂಟ್‌ಗೆ ನುಗ್ಗಲು ಯತ್ನಿಸಿದ್ದಾರೆ. ಈ ಘಟನೆಯ ಸಿಸಿಟಿವಿ ದೃಶ್ಯಗಳು ಲಭ್ಯವಾಗಿದ್ದು, ಇದರಲ್ಲಿ ನಾಲ್ವರು ವ್ಯಕ್ತಿಗಳು ತಮ್ಮ ಮುಖವನ್ನು ಬಟ್ಟೆಯಿಂದ ಮುಚ್ಚಿಕೊಂಡು ಫ್ಲಾಟ್‌ ನ ಒಳಗೆ ನುಗ್ಗಲು ಯತ್ನಿಸಿರುವುದು, ಅಪಾರ್ಟ್ ಮೆಂಟ್‌ಗೆ ಪ್ರವೇಶಿಸಲು ವಿಫಲರಾಗಿ ಸ್ಥಳದಿಂದ ಹಿಂತಿರುಗಿರುವುದು ಕಂಡುಬಂದಿದೆ ಎನ್ನಲಾಗಿದೆ.






 

 

error: Content is protected !!
Scroll to Top