(ನ್ಯೂಸ್ ಕಡಬ)newskadaba.com ಹಾಸನ, ಜು.31. ಮುಂಜಾನೆ ಸುರಿದ ಮಳೆ ಮತ್ತು ಭೂಕುಸಿತದಿಂದ ಸಕಲೇಶಪುರ ತಾಲೂಕಿನ ಕುಂಬರಾಡಿ ಮತ್ತು ಹಾರ್ಲೆ ಎಸ್ಟೇಟ್ ನಡುವಿನ ರಸ್ತೆ ಕೊಚ್ಚಿ ಹೋಗಿದೆ.
ಅವೈಜ್ಞಾನಿಕವಾಗಿ ನಡೆಯುತ್ತಿರುವ ಎತ್ತಿನಹೊಳೆ ಯೋಜನೆಯಿಂದಾಗಿ ಸಕಲೇಶಪುರ ತಾಲೂಕಿನ ಕೆಲವೆಡೆ ಭೂಕುಸಿತ ಉಂಟಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಭಾರೀ ಮಳೆಗೆ ರಸ್ತೆ ಕೊಚ್ಚಿಹೋಗಿ 80 ಅಡಿ ಆಳಕ್ಕೆ ಕುಸಿದಿದ್ದು, ಅಕ್ಕಪಕ್ಕದ ಐದು ಗ್ರಾಮಗಳು ಹೋಬಳಿ ಮತ್ತು ತಾಲೂಕು ಕೇಂದ್ರಗಳಿಗೆ ಸಂಪರ್ಕ ಕಳೆದುಕೊಂಡಿವೆ. ಮಲ್ಲೇಗದ್ದೆ, ಕಾಡುಮನೆ ಮತ್ತು ಹಾರ್ಲೆ ಜನರು ಭೂಕುಸಿತದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ ಎನ್ನಲಾಗಿದೆ.