ಉಳ್ಳಾಲ: ಮರಳು ಮಾಫಿಯಾ ಪ್ರಕರಣ…!    ತನಿಖಾ ಸಮಿತಿಯಿಂದ ತಿಂಗಳಾದರೂ ಸಲ್ಲಿಕೆಯಾಗದ ವರದಿ

(ನ್ಯೂಸ್ ಕಡಬ)newskadaba.com ಉಳ್ಳಾಲ, ಜು.30. ಅರ್ಧದಷ್ಟು ದ್ವೀಪವನ್ನೇ ನುಂಗಿರುವ ಪಾವೂರು- ಉಳಿಯ ಅಕ್ರಮ ಮರಳುಗಾರಿಕೆ ಕುರಿತು ವರದಿ ಮಾಡಿದ ಬೆನ್ನಲ್ಲೇ ಜಿಲ್ಲಾಡಳಿತ ಮಂಗಳೂರು ಉಪ ವಿಭಾಗ ದಂಡಾಧಿಕಾರಿ ನೇತೃತ್ವದಲ್ಲಿ ಪೊಲೀಸ್‌ ಇಲಾಖೆ ಹಾಗೂ ಏಳು ಸದಸ್ಯರನ್ನು ಒಳಗೊಂಡ ಸಮಿತಿಗೆ ವಾರದೊಳಗೆ ಸರಕಾರಕ್ಕೆ ವರದಿ ಸಲ್ಲಿಸಲು ಆದೇಶ ನೀಡಿದ್ದರೂ, ವಾರ ಕಳೆದು ತಿಂಗಳಾದರೂ ಸಮಿತಿಯ ವರದಿ ಮಾತ್ರ ಜಿಲ್ಲಾಡಳಿತ ಕೈಸೇರಿಲ್ಲ ಎನ್ನಲಾಗಿದೆ.

ಪತ್ರಿಕೆಗಳು ಹಾಗೂ ದೃಶ್ಯ ಮಾಧ್ಯಮಗಳು ಜನಗಾಗೃತಿ ಹಿನ್ನೆಲೆಯಲ್ಲಿ ನಿರಂತರವಾಗಿ ವರದಿ ಪ್ರಕಟಿಸಿದ ಪರಿಣಾಮವಾಗಿ ತನಿಖೆಗೆ ಒತ್ತಾಯಿಸಿದ್ದ ಜಿಲ್ಲಾಧಿಕಾರಿ ಅದಕ್ಕಾಗಿ ಸಮಿತಿಯನ್ನು ರಚಿಸಿದ್ದರು. ಆದರೆ ಈವರೆಗೂ ವರದಿ ಜಿಲ್ಲಾಡಳಿತ ಹಾಗೂ ಸರಕಾರದ ಕೈಸೇರದ ಹಿನ್ನೆಲೆಯಲ್ಲಿ ಮರಳು ಮಾಫಿಯಾ ಜೊತೆಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಕೈವಾಡ ಇದೆಯೇ ಅನ್ನುವ ಸಂಶಯವನ್ನು ಕುದ್ರು ನಿವಾಸಿಗಳು ವ್ಯಕ್ತಪಡಿಸಿದ್ದಾರೆ.

Also Read  ದನಗಳ ಅಕ್ರಮ ಸಾಗಾಟ: ನಾಲ್ವರ ಬಂಧನ

 

error: Content is protected !!
Scroll to Top