ಪೆಡ್ಲರ್’ಗಳ ಪತ್ತೆಗೆ ಪೊಲೀಸರ ಮಾಸ್ಟರ್ ಪ್ಲಾನ್..!         ಮಾದಕವಸ್ತು ಬಳಕೆದಾರರನ್ನೇ ಮಾಹಿತಿದಾರರನ್ನಾಗಿ ಬಳಸಲು ಮುಂದು           

(ನ್ಯೂಸ್ ಕಡಬ)newskadaba.com ಬೆಂಗಳೂರು, ಜು.29. ಮಾದಕ ವಸ್ತು ಜಾಲ ಪತ್ತೆ ಹಾಗೂ ಪೆಡ್ಲರ್ ಗಳ ಪತ್ತೆಗೆ ಖಾಕಿ ಪಡೆ ಮಾಸ್ಟರ್‌ ಪ್ಲಾನ್‌ ರೂಪಿಸಿದೆ.

ಮಾದಕ ದ್ರವ್ಯ ಸೇವನೆ ಪ್ರಕರಣಗಳಲ್ಲಿ ಮೊದಲ ಬಾರಿಗೆ ಸಿಕ್ಕಿಬಿದ್ದವರ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸುವುದನ್ನು ನಿಲ್ಲಿಸಿ, ಅವರನ್ನೇ ಮಾಹಿತಿದಾರರನ್ನಾಗಿ ಬಳಕೆ ಮಾಡಿಕೊಳ್ಳಲು ಮುಂದಾಗಿದ್ದಾರೆ. ಆದರೆ, ಇದೇ ವ್ಯಕ್ತಿ ಮತ್ತೆ ಸಿಕ್ಕಿಬಿದ್ದಿದ್ದೇ ಆದರೆ, ಪ್ರಕರಣ ದಾಖಲಿಸಲು ನಿರ್ಧರಿಸಿದ್ದಾರೆಂದು ತಿಳಿದುಬಂದಿದೆ.  ರಾಜ್ಯ ಪೊಲೀಸರು ಕಳೆದ 6 ತಿಂಗಳುಗಲ್ಲಿ 619 ಕೆಜಿ ಡ್ರಗ್ಸ್ ವಶಕ್ಕೆ ಪಡೆದುಕೊಂಡಿದ್ದು, 36 ಮಂದಿ ವಿದೇಶಿ ಪ್ರಜೆಗಳು ಸೇರಿ ಒಟ್ಟು 219 ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ.

Also Read  ರಾಜ್ಯದಲ್ಲಿ ಮತ್ತೆ 18 ಮಂದಿಗೆ ಕೊರೋನ ಸೋಂಕು ದೃಢ: 400ರ ಗಟಿ ದಾಟಿದ ಸೋಂಕಿತರ ಸಂಖ್ಯೆ

 

 

error: Content is protected !!
Scroll to Top