ದಲಿತ ಯುವಕನ ಕೈ ಕತ್ತರಿಸಿದ್ದ ಇಬ್ಬರು ರೌಡಿಶೀಟರ್‌ಗಳ ಬಂಧನ    

(ನ್ಯೂಸ್ ಕಡಬ)newskadaba.com ಬೆಂಗಳೂರು, ಜು.29.  ದಲಿತ ಯುವಕನ ಮೇಲೆ ಹಲ್ಲೆ ನಡೆಸಿ ಕೈ ಕತ್ತರಿಸಿದ ಆರೋಪದ ಮೇಲೆ ಕನಕಪುರದಲ್ಲಿ ಇಬ್ಬರು ರೌಡಿಶೀಟರ್‌ಗಳ ಕಾಲುಗಳಿಗೆ ಪೊಲೀಸರು ಗುಂಡು ಹಾರಿಸುವ ಮೂಲಕ ಅವರನ್ನು ಬಂಧಿಸಿದ್ದಾರೆ ಎಂದು ವರದಿ ತಿಳಿಸಿದೆ.

ಆರೋಪಿಗಳನ್ನು ಹರ್ಷ ಅಲಿಯಾಸ್ ಕೈಮಾ ಮತ್ತು ಕರುಣೇಶ್ ಅಲಿಯಾಸ್ ಕಣ್ಣ ಎಂದು ಗುರುತಿಸಲಾಗಿದೆ. ಇಬ್ಬರು ರೌಡಿಶೀಟರ್‌ ಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ದಲಿತ ಯುವಕ ಅನೀಶ್‌ಕುಮಾರ್‌ ಕುಟುಂಬದ ಮೇಲೆ ದಾಳಿ ನಡೆಸಿದ ಒಕ್ಕಲಿಗ ಸಮುದಾಯದ ಏಳು ಮಂದಿ ಶಸ್ತ್ರಧಾರಿಗಳ ತಂಡ ಆತನ ಎಡಗೈ ಕತ್ತರಿಸಿ ಪರಾರಿಯಾಗಿತ್ತು. ದಲಿತ ಪರ ಸಂಘಟನೆಗಳು ಈ ಕೃತ್ಯವನ್ನು ಖಂಡಿಸಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಸಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.

Also Read  ಕಲ್ಲುಗುಡ್ಡೆ: ಮದ್ಯದಂಗಡಿ ವಿರೋಧಿಸಿ ಜಮಾಯಿಸಿದ ಗ್ರಾಮಸ್ಥರು ► ನಾಳೆ‌ ಕಡಬ ತಹಶೀಲ್ದಾರ್ ಕಛೇರಿ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ

 

 

error: Content is protected !!
Scroll to Top