ಮಂಗಳೂರು: ಭೂಕುಸಿತಗೊಂಡ ಕೆತ್ತಿಕಲ್ ಗುಡ್ಡಕ್ಕೆ ಡಿಸಿ ಭೇಟಿ

(ನ್ಯೂಸ್ ಕಡಬ)newskadaba.com ಮಂಗಳೂರು, ಜು.29. ಭೂಕುಸಿತ ಸಂಭವಿಸಿರುವ ಕೆತ್ತಿಕಲ್ ಗುಡ್ಡ ಪ್ರದೇಶಕ್ಕೆ ಡಿಸಿ ಮುಲ್ಲೈ ಮುಗಿಲನ್ ಭೇಟಿ ನೀಡಿ ಸ್ಥಳೀಯ ನಿವಾಸಿಗಳೊಂದಿಗೆ ಚರ್ಚೆ ನಡೆಸಿದರು ಎಂದು ತಿಳಿದುಬಂದಿದೆ.

ಸಮಸ್ಯೆಗೆ ಕಾರಣ ಹಾಗೂ ಪರಿಹಾರಕ್ಕೆ ಸಮಗ್ರ ವರದಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.   ಸ್ಥಳದಲ್ಲಿದ್ದ ಎನ್‌ಎಚ್‌ಐ ಅಧಿಕಾರಿಗಳನ್ನು ಡಿಸಿ ತರಾಟೆಗೆ ತೆಗೆದುಕೊಂಡರು. ಸಮಸ್ಯೆಯ ಕುರಿತು ಸಮಗ್ರ ವರದಿ ನೀಡಲು ಎಂಸಿಸಿಗೆ ಸೂಚನೆಗಳನ್ನು ನೀಡಲಾಗಿದೆ. ಎಸಿ ಹರ್ಷವರ್ಧನ್, ಎಂಸಿಸಿ ಜಿಲ್ಲಾಧಿಕಾರಿ, ಎಂಜಿನಿಯರ್ ಮತ್ತು ಎನ್‌ಎಚ್‌ಐ ಅಧಿಕಾರಿಗಳು ಉಪಸ್ಥಿತರಿದ್ದರು ಎನ್ನಲಾಗಿದೆ.

Also Read 

 

error: Content is protected !!
Scroll to Top