ವಿದ್ಯುತ್ ಪ್ರವಹಿಸಿ ಪೈಂಟರ್ ಮೃತ್ಯು

(ನ್ಯೂಸ್ ಕಡಬ)newskadaba.com ಬೈಂದೂರು, ಜು.27. ಲಾರಿ ಚಾಸಿಸ್ ಪೇಂಟ್ ಮಾಡುವ ವೇಳೆ ವಿದ್ಯುತ್ ಆಘಾತದಿಂದ ಪೈಂಟರೊಬ್ಬರು ಮೃತಪಟ್ಟ ಘಟನೆ ಬೈಂದೂರಿನಲ್ಲಿ ನಡೆದಿದೆ.


ಮೃತರನ್ನು ಗಂಗೊಳ್ಳಿ ನಿವಾಸಿ ಸಂದೀಪ್( 40 ) ಎಂದು ಗುರುತಿಸಲಾಗಿದೆ. ಇವರು ಟ್ರಾನ್ಸ್ಪೋರ್ಟ್ ಸಂಸ್ಥೆಯೊಂದರ ಲಾರಿಗಳ ಪೇಂಟಿಂಗ್ ಮಾಡಲು ಆಗಮಿಸಿದ್ದು, ಈ ವೇಳೆ ಪೇಂಟಿಂಗ್ ಕಂಪ್ರೆಸರ್ ಯಂತ್ರದಲ್ಲಿ ವಿದ್ಯುತ್ ಹರಿದ ಪರಿಣಾಮ ವಿದ್ಯುತ್ ಶಾಕ್‌ಗೆ ಒಳಗಾದ ಇವರು ತೀವ್ರವಾಗಿ ಅಸ್ವಸ್ಥಗೊಂಡು ಸ್ಥಳದಲ್ಲಿಯೇ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!

Join the Group

Join WhatsApp Group