ಡೆಂಗ್ಯೂ ಸೋಂಕಿದ್ದವರ ಮೇಲೆ 14 ದಿನಗಳ ನಿಗಾ ಕಡ್ಡಾಯ     ರಾಜ್ಯ ಸರ್ಕಾರ          

(ನ್ಯೂಸ್ ಕಡಬ)newskadaba.com ಬೆಂಗಳೂರು, ಜು.27. ಡೆಂಗ್ಯೂ ಸೋಂಕಿಗೊಳಗಾದವರ ಮೇಲೆ 14 ದಿನಗಳ ವರೆಗಿನ ನಿಗಾ ಕಡ್ಡಾಯ ಎಂದು ರಾಜ್ಯ ಸರ್ಕಾರ ಹೇಳಿದೆ.

ಬೆಂಗಳೂರಿನ ಯಲಹಂಕದದಲ್ಲಿ ಡೆಂಗ್ಯೂ ಹಾಟ್ ಸ್ಪಾಟ್ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಚಿವರು, ಡೆಂಗ್ಯೂ ನಿಯಂತ್ರಣ ವಿಚಾರದಲ್ಲಿ ಬೆಂಗಳೂರಿನಲ್ಲಿ ಹೆಚ್ಚಿನ ಗಮನ ಹರಿಸಲಾಗುತ್ತಿದೆ ಎಂದು ಹೇಳಿದರು. ಇಂದು ಈಡಿಸ್ ಸೊಳ್ಳೆಯ ಲಾರ್ವಾ ನಾಶಪಡಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಚಿವರು, ಸ್ಥಳೀಯ ಶಾಲೆಗಳಿಗೆ ತೆರಳಿ ಡೆಂಗ್ಯೂ ಕುರಿತು ಜಾಗೃತಿ ಮೂಡಿಸಿದರು.

Also Read  ಭೀಕರ ರಸ್ತೆ ಅಪಘಾತ - ಡಿವೈಡರ್ ಗೆ ಕಾರು ಢಿಕ್ಕಿಯಾಗಿ ಮೂವರ ದುರ್ಮರಣ

                       

 

 

error: Content is protected !!
Scroll to Top