ಸುಬ್ರಹ್ಮಣ್ಯ ಬಳಿ ರೈಲು ಹಳಿ ಮೇಲೆ ಭೂಕುಸಿತ      ಪ್ರಯಾಣಿಕರಲ್ಲಿ ಆತಂಕ   

(ನ್ಯೂಸ್ ಕಡಬ)newskadaba.com ಸುಬ್ರಮಣ್ಯ, ಜ.27.  ಸುಬ್ರಹ್ಮಣ್ಯ ಸಮೀಪದ ರೈಲ್ವೆ ಹಳಿ ಮೇಲೆ ಸಂಜೆ 6:56 ರ ಸುಮಾರಿಗೆ ಭೂಕುಸಿತ ಸಂಭವಿಸಿದ್ದು ಪ್ರಯಾಣಿಕರಲ್ಲಿ ಆತಂಕ ಮೂಡಿಸಿದೆ. ಮಣ್ಣಿನ ಸವಕಳಿ ಸಂಭವಿಸಿದ್ದು, ಹಲವು ರೈಲು ಸೇವೆಗಳನ್ನು ರದ್ದು ಪಡಿಸಲಾಗಿದೆ.

ರದ್ದು ಪಡಿಸಲಾದ  ರೈಲು ಸೇವೆಗಳು ಈ ಕೆಳಗಿನಂತಿವೆ
ರೈಲು ಸಂಖ್ಯೆ 16595 KSR ಬೆಂಗಳೂರು – ಕಾರವಾರ ಪಂಚಗಂಗಾ ಸೂಪರ್-ಫಾಸ್ಟ್ ಎಕ್ಸ್‌ಪ್ರೆಸ್, 26.07.2024 ರಂದು ಪ್ರಾರಂಭವಾಗುವ ರೈಲು ಸಂಚಾರ ರದ್ದು ಪಡಿಸಲಾಗಿದೆ.

ರೈಲು ಸಂಖ್ಯೆ 16596 ಕಾರವಾರ – ಕೆಎಸ್‌ಆರ್ ಬೆಂಗಳೂರು ಪಂಚಗಂಗಾ ಸೂಪರ್-ಫಾಸ್ಟ್ ಎಕ್ಸ್‌ಪ್ರೆಸ್, 26.07.2024 ರಂದು ಪ್ರಾರಂಭವಾಗುವ ಪ್ರಯಾಣ ರದ್ದು ಪಡಿಸಲಾಗಿದೆ.

Also Read  ಸ್ವಾತಂತ್ರ್ಯ ದಿನಾಚರಣೆಯ ಹಿನ್ನಲೆಯಲ್ಲಿ ಮಂಗಳೂರು ➤ರೈಲ್ವೇ ನಿಲ್ದಾಣದಲ್ಲಿ ತಪಾಸಣೆ

ರೈಲು ಸಂಖ್ಯೆ 16586 ಮುರ್ಡೇಶ್ವರ – SMVT ಬೆಂಗಳೂರು ಎಕ್ಸ್‌ಪ್ರೆಸ್, 26.07.2024 ರಂದು ಪ್ರಾರಂಭವಾಗುವ ಸಂಚಾರ ರದ್ದು ಪಡಿಸಲಾಗಿದೆ.

ರೈಲು ಸಂಖ್ಯೆ 16512 ಕಣ್ಣೂರು-ಕೆಎಸ್ಆರ್ ಬೆಂಗಳೂರು ಎಕ್ಸ್‌ಪ್ರೆಸ್, 26.07.2024 ರಂದು ಪ್ರಾರಂಭವಾಗುವ ಪ್ರಯಾಣವನ್ನು  ರದ್ದು ಪಡಿಸಲಾಗಿದೆ.

ಪರಿಹಾರ  ಮತ್ತು ರಕ್ಷಣಾ ತಂಡಗಳು ಸ್ಥಳದಲ್ಲಿಯೇ ಬೀಡುಬಿಟ್ಟಿದೆ  ಮತ್ತು ಪುನಃಸ್ಥಾಪನೆ ಕಾರ್ಯಗಳು ಪ್ರಸ್ತುತ ಪ್ರಗತಿಯಲ್ಲಿವೆ.

 

error: Content is protected !!
Scroll to Top