ಉಳ್ಳಾಲ: ಆಟೋ ಚಾಲಕ ನಾಪತ್ತೆ ದೂರು ದಾಖಲು

(ನ್ಯೂಸ್ ಕಡಬ)newskadaba.com ಉಳ್ಳಾಲ, ಜು.27. ಆಟೋ ಚಾಲಕರೋರ್ವರು ನಾಪತ್ತೆಯಾಗಿರುವ ಕುರಿತು ವರದಿಯಾಗಿದೆ. ನಾಪತ್ತೆಯಾದವರನ್ನು ಉಳ್ಳಾದ ಮಡ್ಯಾರ್ ನಿವಾಸಿ ಮೆಲ್ವಿನ್ ಮೋಂತೆರೋ (56) ಎಂದು ಗುರುತಿಸಲಾಗಿದೆ.


ಕೋಟೆಕಾರಿನ ಖಾಸಗಿ ಶಾಲೆಯೊಂದರ ಬಳಿ ಬೆಳಗ್ಗೆ ರಿಕ್ಷಾ ಬಾಡಿಗೆ ತೆರಳಿದ ಬಳಿಕ ನಾಪತ್ತೆಯಾಗಿದ್ದಾರೆನ್ನಲಾಗಿದೆ. ರಾತ್ರಿಯಾದರೂ ಮನೆಗೂ ವಾಪಸ್ ಬಾರದೆ ಇದ್ದಾಗ ಮನೆ ಮಂದಿ ಸಂಬಂಧಿಕರ ಬಳಿ ವಿಚಾರಿಸಿದಾಗಲೂ ಪತ್ತೆಯಾಗಿರಲಿಲ್ಲ ಎಂದು ವರದಿ ತಿಳಿಸಿದೆ.

error: Content is protected !!
Scroll to Top