ಬೆಳ್ತಂಗಡಿ: ಭಾರೀ ಗಾಳಿ ಮಳೆಗೆ ತಾಲೂಕಿನ ವಿವಿಧೆಡೆ ವ್ಯಾಪಕ ಹಾನಿ ಜನಜೀವನ ಅಸ್ತವ್ಯಸ್ತ

(ನ್ಯೂಸ್ ಕಡಬ)newskadaba.com ಬೆಳ್ತಂಗಡಿ, ಜು.26. ವಿವಿಧೆಡೆ ಭಾರೀ ಗಾಳಿ- ಮಳೆಗೆ ಪರಿಣಾಮ ವ್ಯಾಪಕ ಹಾನಿಯಾಗಿದ್ದು, ನಾಗರಿಕರು ಸಮಸ್ಯೆಗೆ ಸಿಲುಕಿದ್ದಾರೆ. ಅಣಿಯೂರಿನಿಂದ ನೆರಿಯ ಗ್ರಾಮ ಪಂಚಾಯತ್ ವರೆಗೆ ರಸ್ತೆ ಬದಿಯಲ್ಲಿದ್ದ ಮರಗಳು ಧರೆಗೆ ಉರುಳಿವೆ. ಪೆರಿಯಡ್ಕ ರಸ್ತೆಯಲ್ಲೂ ಐದಕ್ಕೂ ಅಧಿಕ ಮರಗಳು ನೆಲಕ್ಕುರುಳಿವೆ.

ವಿವಿಧೆಡೆ ಮರಗಳು ಮುರಿದು ಬಿದ್ದಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ. ಪ್ರಾಥಮಿಕ ಮಾಹಿತಿಯಂತೆ ಸುಮಾರು ೪೦ಕ್ಕೂ ಅಧಿಕ ವಿದ್ಯುತ್ ಕಂಬಗಳು ನೆರಿಯ ಒಂದೇ ಗ್ರಾಮದಲ್ಲಿ ಉರುಳಿಬಿದ್ದಿವೆ. ಇದರಿಂದ ನೆರಿಯ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲೂ ವಿದ್ಯುತ್ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದೆ ಎನ್ನಲಾಗಿದೆ.

Also Read  ಕರಾವಳಿಯಲ್ಲಿ ಜೂ.11 ರಿಂದ ಭಾರೀ ಮಳೆ ಸಾಧ್ಯತೆ ➤ 'ಆರೆಂಜ್ ಅಲರ್ಟ್' ಘೋಷಣೆ

 

error: Content is protected !!
Scroll to Top