(ನ್ಯೂಸ್ ಕಡಬ)newskadaba.com ಜಿನೀವಾ, ಜು.26. ಭಾರತದಲ್ಲಿ ಅಲಸಂಖ್ಯಾತ ವಿರುದ್ಧದ ಹಿಂಸಾಚಾರ, ತಾರತಮ್ಯ ಆರೋಪ ಮತ್ತು ದೇಶದ ಕೆಲವು ಜಿಲ್ಲೆಗಳಲ್ಲಿ ಯುಎಪಿಎ ಕಾಯ್ದೆಯಡಿ ಶಿಕ್ಷೆಗೆ ಗುರಿಪಡಿಸುತ್ತಿರುವುದರ ಬಗ್ಗೆ ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದೆ ಎನ್ನಲಾಗಿದೆ.
ವಿಶ್ವಸಂಸ್ಥೆ ಮಾನವ ಹಕ್ಕುಗಳ ಸಮಿತಿಯು ತನ್ನ ಇತ್ತೀಚಿನ ಅಧಿವೇಶನದಲ್ಲಿ ಕ್ರೊಯೇಷಿಯಾ, ಹೊಂಡುರಾಸ್, ಭಾರತ, ಮಾಲ್ಡೀವ್ಸ್, ಮಾಲ್ಟಾ, ಸುರಿನಾಮ್ ಮತ್ತು ಸಿರಿಯಾದಲ್ಲಿ ಅಲ್ಪಸಂಖ್ಯಾತರ ವಿರುದ್ಧದ ಹಿಂಸಾಚಾರ ಕುರಿತ ಪರಿಶೀಲನೆಯ ನಂತರ ಭಾರತ ಬಗ್ಗೆ ಈ ರೀತಿ ಹೇಳಿದೆ ಎಂದು ವರದಿಯಾಗಿದೆ.