ಜೈಲಿನಿಂದ ತಪ್ಪಿಸಿಕೊಂಡ ಆರು ವರ್ಷಗಳ ನಂತರ ಸಿಕ್ಕಿಬಿದ್ದ ಅಪರಾಧಿ ಮತ್ತೆ ಸೆರೆಮನೆ ವಾಸ ಫಿಕ್ಸ್

(ನ್ಯೂಸ್ ಕಡಬ)newskadaba.com ಬೆಂಗಳೂರು, ಜು.25. ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಟ್ರಾಫಿಕ್ ಕೋರ್ಟ್‌ ನಿಂದ ಪರಾರಿಯಾಗಿದ್ದ ರಸ್ತೆ ಅಪಘಾತದಲ್ಲಿ ಶಿಕ್ಷೆಗೊಳಗಾಗಿದ್ದ ಅಪರಾಧಿಯನ್ನು ಜೀವನ್ ಭೀಮಾ ನಗರ ಸಂಚಾರ ಪೊಲೀಸರು ಪತ್ತೆಹಚ್ಚಿದ್ದಾರೆ ಎನ್ನಲಾಗಿದೆ.


2015ರಲ್ಲಿ ದ್ವಿಚಕ್ರವಾಹನದಲ್ಲಿ ಹೋಗುತ್ತಿದ್ದ ಆರೋಪಿ ದಿನೇಶ್ (32) ಮೊಪೆಡ್‌ನಲ್ಲಿದ್ದ ಗುರುಪ್ಪ (54) ಅವರಿಗೆ ಡಿಕ್ಕಿ ಹೊಡೆದು ಕೆಳಗೆ ಬೀಳಿಸಿದ್ದರಿಂದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ. ಪೊಲೀಸರು ಐಪಿಸಿಯ ಸೆಕ್ಷನ್ 279 (ನಿರ್ಲಕ್ಷ್ಯದ ಸವಾರಿ) ಮತ್ತು 304 (ಎ) (ಸಾವಿಗೆ ಕಾರಣ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. 2018 ರಲ್ಲಿ, 6 ನೇ ಎಂಎಂಟಿಸಿ ನ್ಯಾಯಾಲಯವು ಆತನಿಗೆ 1 ವರ್ಷ 2 ತಿಂಗಳ ಜೈಲು ಶಿಕ್ಷೆ ಮತ್ತು ರೂ 2,000 ದಂಡವನ್ನು ವಿಧಿಸಿತು.

Also Read  ಮಂಗನಿಗೆ ಕೊರೋನಾ ಲಸಿಕೆ ➤ ಕೊರೋನಾ ಲಸಿಕೆ ಪ್ರಯೋಗ ಯಶಸ್ವಿ

error: Content is protected !!
Scroll to Top