ತಂದೆಯ ಕಿರುಕುಳ ತಾಳಲಾರದೆ ಪುತ್ರ ಆತ್ಮಹತ್ಯೆ

(ನ್ಯೂಸ್ ಕಡಬ)newskadaba.com ಹಾಸನ, ಜು.25. ಕೌಟುಂಬಿಕ ವಿಚಾರಕ್ಕೆ ತಂದೆಯ ನಿರಂತರ ಕಿರುಕುಳ ತಾಳಲಾರದೆ ಪುತ್ರನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ. ಮೃತನನ್ನು ಅಕಿಲ್ ಪಾಶ (25) ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತನ ತಂದೆ ಸೈಯದ್ ಪಾಷಾ ಹಲವು ಸಂದರ್ಭಗಳಲ್ಲಿ ಕೌಟುಂಬಿಕ ವಿಚಾರವಾಗಿ ತನ್ನ ಮಗ ಮತ್ತು ಸೊಸೆ ವಿರುದ್ಧ ಅವಾಚ್ಯ ಶಬ್ಧಗಳಿಂದ ಜಗಳವಾಡುತ್ತಿದ್ದ ಎನ್ನಲಾಗಿದೆ.

ಸಂಬಂಧಿಕರು ಮತ್ತು ನೆರೆಹೊರೆಯವರು ಪೊಲೀಸರ ಸಹಾಯದಿಂದ ಸೈಯದ್ ಪಾಷಾ ಮತ್ತು ಅವರ ಮಗನನ್ನು ಸಮಾಧಾನಪಡಿಸಲು ಹಲವು ಬಾರಿ ಪ್ರಯತ್ನಿಸಿದರೂ ಅದು ವಿಫಲವಾಗಿದೆ. ಈ ಸಂಬಂಧ ಸೈಯದ್ ಪಾಷಾ ವಿರುದ್ಧ ಅರಸೀಕೆರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Also Read  ಬಲ್ಯ ಶ್ರೀ ಉಮಾಮಹೇಶ್ವರಿ ದೇವಸ್ಥಾನ ► ನವರಾತ್ರಿ ಉತ್ಸವ, ಅಕ್ಷರಭ್ಯಾಸ

 

 

error: Content is protected !!
Scroll to Top