ಮಂಗಳೂರು: ವಾಹನಗಳಲ್ಲಿ ಪ್ರಖರ ಎಲ್ಐಡಿ ಲೈಟ್ ಬಳಕೆ 1170 ಪ್ರಕರಣ ದಾಖಲು, 5.86 ಲಕ್ಷ ರೂ. ದಂಡ.!

(ನ್ಯೂಸ್ ಕಡಬ)newskadaba.com ಮಂಗಳೂರು, ಜು.25. ಹೆಚ್ಚು ಪ್ರಖರ ಬೆಳಕು ಹೊರಸೂಸುವ ಹಾಗೂ ಕಣ್ಣು ಕುಕ್ಕುವಂತಹ ದೀಪಗಳನ್ನು ಅಳವಡಿಸಿ ಕಮಿಷನರೇಟ್ ವ್ಯಾಪ್ತಿಯಲ್ಲಿ ಚಲಾಯಿಸಿರುವ ವಾಹನಗಳ ಮಾಲೀಕರ ವಿರುದ್ಧ ಪೊಲೀಸರು ಕಾರ್ಯಾಚರಣೆ ತೀವ್ರಗೊಳಿಸಿದ್ದು ಒಟ್ಟು 1,170 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, 5,86,500 ಲಕ್ಷ ರೂ. ದಂಡ ವಿಧಿಸಿದ್ದಾರೆ ಎನ್ನಲಾಗಿದೆ.


ಪಡಿಸಿದ ಹೆಡ್‌ಲೈಟ್‌ ಗಳನ್ನು ಮಾತ್ರ ಅಳವಡಿಸಬೇಕು, ಹೆಚ್ಚುವರಿಯಾಗಿ ಆಲಂಕಾರಿಕ ದೀಪ ಹಾಗೂ ಪ್ರಖರ ಬೆಳಕು ಸೂಸುವ ಮತ್ತು ಕಣ್ಣಿಗೆ ಕುಕ್ಕುವ ಎಲ್‌.ಇ.ಡಿ. ಬಲ್ಬ್ ಗಳನ್ನು ಅಳವಡಿಸುವಂತಿಲ್ಲ. ಸಾರ್ವಜನಿಕರು ತಮ್ಮ ಮೋಟಾರು ವಾಹನಗಳಿಗೆ ಕೇಂದ್ರ ಮೋಟಾರು ವಾಹನ ಕಾಯ್ದೆ-1989ರಲ್ಲಿ ಸೂಚಿಸಿರುವ ಮಾನದಂಡದಂತೆ ನಿಗದಿ ‘ಕಣ್ಣೂ ಕುಕ್ಕುವಂತಹ ದೀಪಗಳನ್ನು ವಾಹನಗಳಲ್ಲಿ ಅಳವಡಿಸದಂತೆ ವಾಹನಗಳ ಚಾಲಕರು ಹಾಗೂ ವಾಹನ ಮಾಲೀಕರಲ್ಲಿ ಜೂನ್‌ 15ರಿಂದ ಜಾಗೃತಿ ಮೂಡಿಸುತ್ತಿದ್ದೇವೆ. ವಾಹನಗಳ ದೀಪವು 1989ರ ಕೇಂದ್ರ ಮೋಟಾರು ವಾಹನ ಕಾಯ್ದೆಯಲ್ಲಿ ಗೊತ್ತುಪಡಿಸಿರುವ ಮಾನದಂಡಗಳಿಗೆ ಅನುಗುಣವಾಗಿರಬೇಕು. ಈ ಕಾಯ್ದೆಯಡಿ ನಿಗದಿಪಡಿಸಿದ ಸಂಖ್ಯೆಗಿಂತ ಹೆಚ್ಚು ಹೆಡ್ ಲೈಟ್ ಅಳವಡಿಸುವುದು, ‌ಹೆಡ್ ಲೈಟ್‌ಗಳನ್ನು ಮಾರ್ಪಡಿಸುವುದಕ್ಕೆ, ವಾಹನದಲ್ಲಿ ಹೆಚ್ಚುವರಿಯಾಗಿ ಎಲ್.ಇ.ಡಿ ಅಳವಡಿಸುವುದಕ್ಕೆ, ಕಣ್ಣಿಗೆ ಕುಕ್ಕುವಂತಹ ಪ್ರಖರ ಬೆಳಕು ಸೂಸುವ ದೀಪಗಳನ್ನು ಅಳವಡಿಸುವುದಕ್ಕೆ ಅವಕಾಶವಿಲ್ಲ’ ಎಂದು ನಗರ ಪೊಲೀಸ್‌ ಕಮಿಷನರ್‌ ಅನುಪಮ್ ಅಗರ್ವಾಲ್‌ ತಿಳಿಸಿದ್ದಾರೆ.

Also Read  ಆಲಂಕಾರು: ನೇಣುಬಿಗಿದು ವ್ಯಕ್ತಿ ಆತ್ಮಹತ್ಯೆ

error: Content is protected !!
Scroll to Top