ತುಳು ಭಾಷೆಯ ಅಧಿಕೃತ ಸ್ಥಾನಮಾನಕ್ಕಾಗಿ ಬೇಡಿಕೆ ಶಾಸಕ ವೇದವ್ಯಾಸ ಕಾಮತ್

(ನ್ಯೂಸ್ ಕಡಬ)newskadaba.com. ಬೆಂಗಳೂರು, ಜು.24. ರಾಜ್ಯದಲ್ಲಿ ತುಳು ಭಾಷೆಯನ್ನು ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯನ್ನಾಗಿ ಘೋಷಿಸುವ ಬಗ್ಗೆ ಶಾಸಕ ವೇದವ್ಯಾಸ ಕಾಮತ್ ಅವರು ವಿಧಾನಸಭೆಯ ಅಧಿವೇಶನದಲ್ಲಿ ಸ್ಪೀಕರ್ ಅವರಲ್ಲಿ ಮನವಿ ಮಾಡಿದರು ಎಂದು ತಿಳಿದುಬಂದಿದೆ.

ಗಮನ ಸೆಳೆಯುವ ಸೂಚನಾ ಕಲಾಪದ ಸಂದರ್ಭದಲ್ಲಿ ಪ್ರಸ್ತಾವವಾದ ವಿಷಯಕ್ಕೆ ದನಿಗೂಡಿಸಿದ ಶಾಸಕರು, ಕಳೆದ ಒಂದೂವರೆ ವರ್ಷದಲ್ಲಿ ತುಳು ಭಾಷೆಯ ಅಧಿಕೃತ ಮಾನ್ಯತೆ ಬಗ್ಗೆ ಎರಡು ಬಾರಿ ಮನವಿ ಮಾಡಿದ್ದೇನೆ. ದೇಶದ ಹಲವು ರಾಜ್ಯಗಳಲ್ಲಿ ಅಧಿಕೃತವಾಗಿ ಎರಡನೇ ಭಾಷೆಯನ್ನಾಗಿ ಪ್ರಾದೇಶಿಕ ಭಾಷೆಗಳಿಗೆ ಮಾನ್ಯತೆ ನೀಡಲಾಗಿದೆ. ಆದರೆ ಎರಡು ಸಾವಿರಕ್ಕಿಂತಲೂ ಅಧಿಕ ವರ್ಷಗಳ ಇತಿಹಾಸವುಳ್ಳ, ತನ್ನದೇ ಸ್ವಂತ ಲಿಪಿ ಹೊಂದಿರುವ ನಮ್ಮ ನಾಡಿನ ತುಳು ಭಾಷೆಗೆ ಇನ್ನೂ ಸಹ ರಾಜ್ಯದಲ್ಲಿ ಅಧಿಕೃತ ಮಾನ್ಯತೆ ಸಿಗದಿರುವುದು ಅತ್ಯಂತ ಖೇದಕರ ಎಂದು ಬೇಸರ ವ್ಯಕ್ತಪಡಿಸಿದರು.

Also Read  ಎಎಪಿ ಶಾಸಕರ ನಿವಾಸಕ್ಕೆ ಇಡಿ ಅಧಿಕಾರಿಗಳ ದಾಳಿ ಅಮಾನತುಲ್ಲಾ ಖಾನ್ ಆಕ್ರೋಶ       

ತುಳು ಭಾಷೆಯಲ್ಲೇ ಯು.ಟಿ ಖಾದರ್ ಅವರನ್ನು ಉದ್ದೇಶಿಸಿ “ನೀವು ಸ್ಪೀಕರ್ ಆಗಿರುವಾಗಲೇ ಇದೊಂದು ಕೆಲಸ ಆಗಲಿ ಎಂದು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಜನತೆಯ ಪರವಾಗಿ ಕೈ ಮುಗಿದು ಮನವಿ ಮಾಡುತ್ತೇನೆ” ಎಂದರು. ಇದಕ್ಕೆ ಸ್ಪೀಕರ್ ಅವರೂ ಸಹ ತುಳು ಭಾಷೆಯಲ್ಲೇ ಸಾಕಾರಾತ್ಮಕವಾಗಿ ಸ್ಪಂದಿಸಿದ್ದು ಕರಾವಳಿ ಭಾಗದ ಶಾಸಕರು ಬೆಂಬಲಿಸಿದರು ಎನ್ನಲಾಗಿದೆ.

 

 

 

error: Content is protected !!
Scroll to Top