ಪಾರಿವಾಳದ ಪ್ರಾಣ ಉಳಿಸಲು ವಿದ್ಯುತ್ ಕಂಬವೇರಿದ ಬಾಲಕ ಮೃತ್ಯು



(ನ್ಯೂಸ್ ಕಡಬ)newskadaba.com ಚಿತ್ರದುರ್ಗ, ಜು.24. ಪಾರಿವಾಳದ ಜೀವ ಉಳಿಸಲು ಹೋಗಿ ಬಾಲಕನೋರ್ವ ಪ್ರಾಣ ಕಳೆದುಕೊಂಡಿರುವ ಹೃದಯ ವಿದ್ರಾವಕ ಘಟನೆ ವರದಿಯಾಗಿದೆ.





ಮೃತ ಬಾಲಕನನ್ನು ರಾಮಚಂದ್ರ (12) ಎಂದು ಗುರುತಿಸಲಾಗಿದೆ. ವಿದ್ಯುತ್ ಕಂಬದಲ್ಲಿ ಸಿಲುಕಿದ್ದ ಪಾರಿವಾಳ ಕಂಡು ಜೀವ ಉಳಿಸಲು ಕಂಬ ಏರಿದ್ದ ಬಾಲಕ ವಿದ್ಯುತ್ ಹರಿದು ಮೃತಪಟ್ಟಿದ್ದಾನೆ ಎನ್ನಲಾಗಿದೆ.






 

ವಿದ್ಯುತ್ ಶಾಕ್‌ ನಿಂದಾಗಿ ಬಾಲಕನ ಶವ ವಿದ್ಯುತ್ ಕಂಬದಲ್ಲಿನ ತಂತಿಗೆ ಸಿಲುಕಿ ನೇತಾಡುತ್ತಿದ್ದು, ಮಾನವೀಯತೆಯಿಂದ ಪಾರಿವಾಳದ ಜೀವ ಉಳಿಸಲು ಮುಂದಾಗಿದ್ದ ಬಾಲಕ ತನ್ನ ಜೀವವನ್ನೇ ಬಲಿ ನೀಡಿದ್ದಾನೆ. ಸ್ಥಳಕ್ಕೆ ಸಬ್ ಇನ್ಸ್‌ಪೆಕ್ಟರ್‌ ಮಹೇಶ್ ಹೊಸಪೇಟೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವರದಿ ತಿಳಿಸಿದೆ.

 

 

error: Content is protected !!
Scroll to Top